HEALTH TIPS

ಚಿಕಿತ್ಸೆಯೇ ಬೇಕಿಲ್ಲ, ಈ ನೈಸರ್ಗಿಕ ವಿಧಾನದಲ್ಲಿ ಹೈ ಬಿಪಿಯನ್ನು ಕಂಟ್ರೋಲ್​ಗೆ ತರಬಹುದು!

 ಧಿಕ ರಕ್ತದೊತ್ತಡದ ಸಮಸ್ಯೆಯಿಂದ ಉಂಟಾಗುವ ಸ್ಥಿತಿಗಳು ತೀರಾ ಹದಗೆಟ್ಟಿವೆ. ಈ ಕಾಯಿಲೆ ಏನ್‌ ಮಾಹಾ ಅಂತಾ ನಿರ್ಲಕ್ಷ್ಯ ಮಾಡಿದಲ್ಲಿ, ದೇಹದ ಪ್ರಮುಖ ಅಂಗಗಳಾದ ಹೃದಯ, ಮೂತ್ರಕೋಶ, ಮೆದುಳುಗಳಿಗೆ ಹಾನಿ ಆಗುವುದಲ್ಲದೆ ಪ್ರಾಣಕ್ಕೆ ಕುತ್ತು ಬರೋದು ಗ್ಯಾರೆಂಟಿ. ಈ ಅಧಿಕ ರಕ್ತದೊತ್ತಡವು ಒಂದು ಸಾಮಾನ್ಯ ಸ್ಥಿತಿಯಾಗಿದ್ದು, ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡಕ್ಕೆ ಹೀಗೆನ್ನುತ್ತಾರೆ.

ಇದು ಹೆಚ್ಚಾದಲ್ಲಿ ಹೃದಯ ಕಾಯಿಲೆ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಸಮಸ್ಯೆಗಳಂತಹ ಗಂಭೀರ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು. ಆರೋಗ್ಯವಂತ ವ್ಯಕ್ತಿಯ ರಕ್ತದೊತ್ತಡವು ಸಾಮಾನ್ಯವಾಗಿ 120/80 mmHg ಇರುತ್ತದೆ, ಅದೇ ಇದು ಹೆಚ್ಚಾದರೆ ಅಧಿಕ ರಕ್ತದೊತ್ತಡ ಎಂದು ಕರೆಯುತ್ತೇವೆ.

ಚಿಕಿತ್ಸೆ ಏನು?

ಅಧಿಕ ರಕ್ತದೊತ್ತಡಕ್ಕೆ ಚಿಕಿತ್ಸೆ ನೀಡಲು ಔಷಧಿಗಳಿದ್ದರೂ, ಅನೇಕ ಜನರು ತಮ್ಮ ಬಗ್ಗೆ ಕಾಳಜಿ ವಹಿಸಲು ಅಥವಾ ಔಷಧಿಗಳ ಬಳಕೆಯಿಲ್ಲದೆ ತಮ್ಮ ಸ್ಥಿತಿಯನ್ನು ಗುಣಪಡಿಸಲು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಾರೆ

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ರಕ್ತದೊತ್ತಡದ ಮಟ್ಟಗಳ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ನಿರ್ವಹಿಸಲು ಕೆಲವು ನೈಸರ್ಗಿಕ ವಿಧಾನಗಳು ಇಲ್ಲಿವೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೈಸರ್ಗಿಕ ಸಲಹೆಗಳು

ನಿಮ್ಮ ತೂಕವನ್ನು ನಿರ್ವಹಿಸುವುದು

ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಅತ್ಯುತ್ತಮ ತಂತ್ರಗಳಲ್ಲಿ ಒಂದಾಗಿದೆ. ಅಧಿಕ ತೂಕ ಹೊಂದಿರುವ ಜನರು ಸಣ್ಣ ಆಗುವ ಮೂಲಕ ಈ ಸ್ಥಿತಿಯನ್ನು ನಿರ್ವಹಿಸಬಹುದು.

ಹೀಗಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಕಳೆದುಕೊಳ್ಳಲು ಕೆಲವು ಪ್ರಾಯೋಗಿಕ ವಿಧಾನಗಳನ್ನು ಪ್ರಯತ್ನಿಸಿ. ಯೋಗ, ಏರೋಬಿಕ್ಸ್‌, ವರ್ಕೌಟ್‌, ವಾಕಿಂಗ್‌, ರನ್ನಿಂಗ್‌ ಮೂಲಕ ದೇಹವನ್ನು ದಂಡಿಸುವ ಪ್ರಯತ್ನ ಮಾಡಿ.


ಗುಣಮಟ್ಟದ ನಿದ್ರೆ

ನಿದ್ರೆಯ ಅಸಮರ್ಪಕತೆ ನಿಮ್ಮ ಅಧಿಕ ರಕ್ತದೊತ್ತಡವನ್ನು ಉಲ್ಬಣಗೊಳಿಸಬಹುದು. ಆದ್ದರಿಂದ ಏನಿಲ್ಲ ಅಂದ್ರೂ ಏಳು ಗಂಟೆಗಳ ಕಾಲವಾದ್ರೂ ಗುಣಮಟ್ಟದ ನಿದ್ರೆ ಮಾಡಿ. ಗುಣಮಟ್ಟದ ನಿದ್ರೆ ಮಾಡಲು ಮಲಗುವ ಜಾಗದಲ್ಲಿ ಶಾಂತತೆಯನ್ನು ಕಾಪಾಡಿಕೊಳ್ಳಿ. ನಿಯಮಿತವಾದ ನಿದ್ರೆಯ ವೇಳಾಪಟ್ಟಿಯನ್ನು ಇಟ್ಟುಕೊಳ್ಳಿ ಅದು ನಿಮಗೆ ಪ್ರತಿದಿನ ಏಳೆಂಟು ಗಂಟೆಗಳ ಕಾಲ ನಿದ್ರೆಯನ್ನು ಮಾಡಲು ಅನುಮತಿಸುತ್ತದೆ.

ಮಲಗುವ ಮುನ್ನ ಒಂದು ಗಂಟೆಯ ಮುನ್ನವೇ ಫೋನ್‌ ನೋಡೋದನ್ನು ತಪ್ಪಿಸಿ. ಕೆಲ ಉತ್ತಮ ಅಭ್ಯಾಸಗಳ ಮೂಲಕ ನಿದ್ರೆಯ ಗುಣಮಟ್ಟ ಕಾಪಾಡಿಕೊಳ್ಳಿ.

ಹೆಚ್ಚಿನ ಉಪ್ಪು ಸೇವನೆಗೆ ಬ್ರೇಕ್‌ ಹಾಕಿ

ನಿಮ್ಮ ದೈನಂದಿನ ಉಪ್ಪು ಸೇವನೆಯನ್ನು ಕಡಿತಗೊಳಿಸುವುದು ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಇರುವ ಮತ್ತೊಂದು ಪರಿಣಾಮಕಾರಿ ಮಾರ್ಗವಾಗಿದೆ. ಎಷ್ಟು ಕಡಿಮೆ ಸೋಡಿಯಂ ಸೇವಿಸುತ್ತೆವೆಯೋ ಅಷ್ಟು ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಆದ್ದರಿಂದ ಬಿಪಿ ಇರುವವರು ಆದಷ್ಟು ಕಮ್ಮಿ ಉಪ್ಪು ತಿನ್ನಿ.

ಆರೋಗ್ಯಕರ ಆಹಾರವನ್ನು ತಿನ್ನುವುದು

ಪೌಷ್ಟಿಕಾಂಶದಲ್ಲಿ ಸಮೃದ್ಧವಾದ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಡಿಮೆ-ಕೊಬ್ಬಿನ ಡೈರಿ ಉತ್ಪನ್ನಗಳು ಮತ್ತು ಕಡಿಮೆ-ಸ್ಯಾಚುರೇಟೆಡ್ ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ರಕ್ತದೊತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ವಿಟಮಿನ್‌ಗಳು, ಖನಿಜಗಳು, ಪ್ರೋಟೀನ್, ಫೈಬರ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಇತರ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ, ಇವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡುವುದು

ನಿಯಮಿತ ವ್ಯಾಯಾಮವು ಅಧಿಕ ರಕ್ತದೊತ್ತಡವನ್ನು ಸುಮಾರು 5 ರಿಂದ 8 mm Hg ವರೆಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸುವುದನ್ನು ತಡೆಯಲು ನೀವು ವ್ಯಾಯಾಮವನ್ನು ಪ್ರತಿದಿನ ತಪ್ಪದೇ ಮಾಡಬೇಕು. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಮಧ್ಯಮ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿ.

Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries