ಕಾಸರಗೋಡು: ಕೇರಳ ರಾಜ್ಯ ಕಿರು ಕೈಗಾರಿಕಾ ಸಂಘದ ಕಾಸರಗೋಡು ಜಿಲ್ಲಾ ಘಟಕ ವಾರ್ಷಿಕ ಮಹಾಸಭೆ ವಿದ್ಯಾನಗರದ ಸಿಡ್ಕೋ ಇಂಡಸ್ಟ್ರಿಯಲ್ ಎಸ್ಟೇಟ್‍ನಲ್ಲಿರುವ ಸಂಘದ ಕಚೇರಿ ಸಭಾಂಗಣದಲ್ಲಿ ಜರುಗಿತು. ಸಂಘಟನೆ ರಾಜ್ಯಾಧ್ಯಕ್ಷ ಎ. ನಿಸಾರ್ ಅಹಮ್ಮದ್ ಸಮಾರಂಭ ಉದ್ಘಾಟಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಮಹಾ ಪ್ರಬಂಧಕ ಕೆ. ಸಜಿತ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಮುಜೀಬ್ ಅಹಮ್ಮದ್, ಕಾರ್ಯದರ್ಶಿ ಕೆ.ವಿ ಸುಗತನ್, ಕೋಶಾಧಿಕಾರಿ ಅಶ್ರಫ್ ಮಧೂರು, ಜತೆಕಾರ್ಯದರ್ಶಿ ಮಹಮ್ಮದಾಲಿ, ಮಾಜಿ ಅಧ್ಯಕ್ಷರಾದ ಕೆ. ಜನಾರ್ದನನ್, ಕೆ.ಜಿ ಇಮಾನ್ಯುವೆಲ್, ಕೆ. ರವೀಂದ್ರನ್, ಅಹಮ್ಮದಾಲಿ, ಕೆ.ಟಿ ಸುಭಾಷ್‍ನಾರಾಯಣನ್, ಬಿಂದು. ಸಿ, ಪಿ.ವಿ ರವೀಂದ್ರನ್ ಹಾಗೂ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಎಸ್ಸೆಸೆಲ್ಸಿ, ಪ್ಲಸ್ಟು, ಪದವಿ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಕೈಗಾರಿಕೋದ್ಯಮಿಗಳ ಮಕ್ಕಳಿಗೆ ಸ್ಮರಣಿಕೆ ನೀಡಿ ಗೌರವಿಸಲಯಿತು. ಉದ್ಯಮ ರಂಗದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಸ್ಕಂದ ಪ್ಲಾಸ್ಟಿಕ್ಸ್‍ನ ಮುರಳೀಕೃಷ್ಣ ಹಾಗೂ ಉದಯನ್ ಕುಂಡಂಗುಯಿ ಅವರನ್ನು ಗೌರವಿಸಲಯಿತು.
ಈ ಸಂದರ್ಭ 2024-26ನೇ ಸಾಳಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಾಜಾರಾಮ ಎಸ್. ಪೆರ್ಲ ಅಧ್ಯಕ್ಷ, ಕೆ.ವಿ ಸುಗತನ್ ಉಪಾಧ್ಯಕ್ಷ, ಮುಜೀಬ್ ಅಹಮ್ಮದ್ ಪ್ರಧಾನ ಕಾರ್ಯದರ್ಶಿ, ಅಶ್ರಫ್ ಮಧೂರು ಕೋಶಾಧಿಕಾರಿ ಹಾಗೂ ಪ್ರಜೀಶ್ ಅವರನ್ನು ಜತೆಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದ ಅಂಗವಾಗಿ ಕೈಗಾರಿಕೋದ್ಯಮಿಗಳಿಗಾಗಿ ತರಬೇತಿ ಶಿಬಿರ ಆಯೋಜಿಸಲಾಗಿತ್ತು.