ಬದಿಯಡ್ಕ : ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಮಾನ್ಯ ಚುಕ್ಕಿನಡ್ಕ ನಿವಾಸಿ, ಜಯರಾಮ-ಸುಗಂಧೀ ದಂಪತಿ ಪುತ್ರ ಪ್ರೀತೇಶ್ ಸಿ.ಎಚ್(27)ಎಂಬವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಇಲೆಕ್ಟ್ರಿಶಿಯನ್ ವೃತ್ತಿಯಲ್ಲಿದ್ದ ಇವರು, ನಾಲ್ಕು ದಿವಸಗಳ ಹಿಂದೆಯಷ್ಟೆ ಊರಿಗೆ ಆಗಮಿಸಿದ್ದು, ಸೋಮವಾರ ಬೆಂಗಳೂರಿಗೆ ವಾಪಸಾಗಲು ಸಿದ್ಧತೆ ನಡೆಸಿದ್ದರೆನ್ನಲಾಗಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಕಲಿಸಿಕೊಂಡಿದ್ದಾರೆ.