ನ್ಯೂಯಾರ್ಕ್: ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ಪ್ರವೇಶ ಪಡೆಯಲು ದಾಖಲೆಗಳನ್ನು ನೀಡಿರುವ ಆರೋಪದಲ್ಲಿ ಬಂಧಿತನಾಗಿದ್ದ 19 ವರ್ಷದ ವಿದ್ಯಾರ್ಥಿಯು ಅಲ್ಲಿನ ಅಧಿಕಾರಿಗಳೊಂದಿಗೆ ಮಾಡಿಕೊಂಡ ಮನವಿ ಒಪ್ಪಂದದ ಆಧಾರದ ಮೇಲೆ ಭಾರತಕ್ಕೆ ಮರಳಲಿದ್ದಾನೆ.
ನ್ಯೂಯಾರ್ಕ್: ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ಪ್ರವೇಶ ಪಡೆಯಲು ದಾಖಲೆಗಳನ್ನು ನೀಡಿರುವ ಆರೋಪದಲ್ಲಿ ಬಂಧಿತನಾಗಿದ್ದ 19 ವರ್ಷದ ವಿದ್ಯಾರ್ಥಿಯು ಅಲ್ಲಿನ ಅಧಿಕಾರಿಗಳೊಂದಿಗೆ ಮಾಡಿಕೊಂಡ ಮನವಿ ಒಪ್ಪಂದದ ಆಧಾರದ ಮೇಲೆ ಭಾರತಕ್ಕೆ ಮರಳಲಿದ್ದಾನೆ.
ಪೆನ್ಸಿಲ್ವೇನಿಯಾದ ಖಾಸಗಿ ಸಂಶೋಧನಾ ವಿವಿಯಾದ ಲೇಹಿ ವಿವಿಯಲ್ಲಿ 2023- 24ರ ಶೈಕ್ಷಣಿಕ ವರ್ಷಕ್ಕೆ ಪ್ರವೇಶ ಪಡೆಯಲು ಆರ್ಯನ್ ಆನಂದ್ ಎಂಬಾತನು ನಕಲಿ ದಾಖಲೆಗಳನ್ನು ಸಲ್ಲಿಸಿದ್ದನು ಎನ್ನಲಾಗಿದೆ.
ವಿವಿಗೆ ಪ್ರವೇಶ ಮತ್ತು ನಂತರ ಸ್ಕಾಲರ್‌ಶಿಪ್ ಪಡೆಯುವ ಉದ್ದೇಶದಿಂದ ಆರ್ಯನ್, ತನ್ನ ತಂದೆ ನಿಧನ ಹೊಂದಿದ್ದಾಗಿ ನಕಲಿ ಮರಣ ದಾಖಲೆಗನ್ನು ಸೃಷ್ಟಿಸಿ ಸಲ್ಲಿಸಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿರುವುದಾಗಿ ವಿವಿಯ ವಿದ್ಯಾರ್ಥಿ ದಿನಪತ್ರಿಕೆಯಾದ 'ದಿ ಬ್ರೌನ್ ಆಯಂಡ್ ವೈಟ್' ಕಳೆದ ತಿಂಗಳು ವರದಿ ಮಾಡಿತ್ತು.
ತಪ್ಪೊಪ್ಪಿಕೊಂಡ ಆರ್ಯನ್‌ಗೆ ಜೂನ್ 12ರಂದು ಜಿಲ್ಲಾ ನ್ಯಾಯಾಲಯವು ₹20.94 ಲಕ್ಷ ಪಾವತಿಯೊಂದಿಗೆ ಜಾಮೀನು ನೀಡಿದೆ.