HEALTH TIPS

ಸಮಾಜಬಾಂಧವರನ್ನು ಒಗ್ಗೂಡಿಸಲು ಕ್ರೀಡೆ, ಉತ್ಸವಗಳು ಸಹಕಾರಿ - ಸುಬ್ರಾಯ ನಾಯ್ಕ ಟಿ.: ಮರಾಟಿ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ `ಗದೇಂತ್ ಏಕ್ ದೀಸ್'

                 ಬದಿಯಡ್ಕ: ಗ್ರಾಮೀಣ ಜನರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಲು ಕೆಸರುಗದ್ದೆ ಉತ್ಸವ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ಸಾಧ್ಯವಿದೆ. ಹಳ್ಳಿ ಸಂಸ್ಕøತಿ ಮತ್ತು ಜನಪದ ಕಲೆಗಳನ್ನು ಉಳಿಸಿ ಮುಂದಿನ ತಲೆಮಾರಿಗೆ ತಿಳಿಸುವ ಕಾರ್ಯವೂ ತನ್ಮೂಲಕ ನಡೆಯುತ್ತದೆ. ಕೆಸರುಗದ್ದೆ ಕ್ರೀಡಾಕೂಟದ ಮೂಲಕ ಸಮುದಾಯವನ್ನು ಒಗ್ಗೂಡಿಸುವ ಕಾರ್ಯ ಇಲ್ಲಿ ನಡೆದಿದೆ ಎಂದು ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ರಾಜ್ಯ ಅಧ್ಯಕ್ಷ ಸುಬ್ರಾಯ ನಾಯ್ಕ ಟಿ. ಹೇಳಿದರು.

                ಕೇರಳ ಮರಾಟಿ ಸಂರಕ್ಷಣಾ ಸಮಿತಿ ಬದಿಯಡ್ಕಪಂಚಾಯಿತಿ ಸಮಿತಿಯ ನೇತೃತ್ವದಲ್ಲಿ ನೀರ್ಚಾಲು ಓಣಿಯಡ್ಕ ಕೆಸರುಗದ್ದೆಯಲ್ಲಿ ಭಾನುವಾರ ಜರಗಿದ `ಗದೇಂತ್ ಏಕ್ ದೀಸ್' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

                ಕೆಎಂಎಸ್‍ಎಸ್ ಬದಿಯಡ್ಕ ಪಂಚಾಯಿತಿ ಸಮಿತಿ ಅಧ್ಯಕ್ಷ ಗಂಗಾಧರ ನಾಯ್ಕ ಓಣಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಸರ್ಕಾರಿ ಐಟಿಐ ಜೂನಿಯರ್ ಟ್ರೈನಿಂಗ್ ಆಫೀಸರ್ ಯೋಗೀಶ್ ಪಿ. ಮಾತನಾಡಿ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಮನಷ್ಯನನ್ನು ಸದೃಢಗೊಳಿಸುವಲ್ಲಿ ಕ್ರೀಡಾಕೂಟವು ಸಹಕಾರಿ. ಗ್ರಾಮೀಣ ಪ್ರದೇಶದಲ್ಲಿ ಕೆಸರುಗದ್ದೆ ಉತ್ಸವದ ಮೂಲಕ ಪೂರಕವಾದ ಚಟುವಟಿಕೆಯನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಅತಿ ಕಡಿಮೆ ಅವಯಲ್ಲಿ ಇಂತಹ ಒಂದು ಅಭೂತಪೂರ್ವ ಕಾರ್ಯಕ್ರಮವನ್ನು ಸಂಘಟಿಸಿದ ಕಾರ್ಯಕರ್ತರ ಶ್ರಮ ಮೆಚ್ಚಲೇಬೇಕು ಎಂದರು. 

         ಡಾ. ಜನಾರ್ದನ ನಾಯ್ಕ್, ಶ್ಯಾಮಪ್ರಸಾದ ಮಾನ್ಯ, ನಾರಾಯಣ ನಾಯ್ಕ ಅಡ್ಕಸ್ಥಳ, ಕೃಷ್ಣ ನಾಯ್ಕ, ಬಾಲಕೃಷ್ಣ ನಾಯಡ್ಕ, ಮಾಹಿಲ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾಜದ ಹಿರಿಯ ಕೃಷಿಕರು ಹಾಗೂ ನಿವೃತ್ತ ಸೇನಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗೋಪಾಲಕೃಷ್ಣ ಬದಿಯಡ್ಕ ಸ್ವಾಗತಿಸಿ, ಬಾಲಕೃಷ್ಣ ಅಚ್ಚಾಯಿ ವಂದಿಸಿದರು. ಬೆಳಗ್ಗೆ ಹಿರಿಯ ಕೃಷಿಕ ಕುಂಞ್ಞಪ್ಪ ನಾಯ್ಕ ಓಣಿಯಡ್ಕ  ಧ್ವಜಾರೋಹಣಗೈದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries