ಮಂಜೇಶ್ವರ: ಕೃಷಿದಿನದ ಅಂಗವಾಗಿ ಬಿಜೆಪಿ ಮಂಜೇಶ್ವರ ಮಂಡಲ ಕರ್ಷಕ ಮೋರ್ಚಾ ನೇತೃತ್ವದಲ್ಲಿ ಮೀಂಜ ಮದಂಗಲ್ಲು ಮಂದಿರದಲ್ಲಿ ಸಮಾರಂಭ ಶನಿವಾರ ನಡೆಯಿತು.
ಬಿಜೆಪಿ ಜಿಲ್ಲಾ ಪ್ರ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಉದ್ಘಾಟಿಸಿ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೃಷಿ ಕ್ರಾಂತಿಯ ಬಗ್ಗೆ ವಿವರಿಸಿದರು. ಕೇರಳದಲ್ಲಿ.
ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಸದಾಶಿವ ಚೇರಾಲ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಮಾತನಾಡಿ ಕೇರಳದಲ್ಲಿ ಆಗುತ್ತಿರುವ ಕೃಷಿಯ ಹಿನ್ನಡೆ, ಇಬ್ಬಗೆ ನೀತಿ ಬಗ್ಗೆ ವಿವರಿಸಿದರು. ಕೃಷಿಕರಾದ ಸೀನ ಪೂಜಾರಿ, ಪ್ರಮೋದ್ ನಾಯ್ಕ್, ಕಿರಣ್ ಭಂಡಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಕರ್ಷಕ ಮೋರ್ಚಾ ಕಾರ್ಯದರ್ಶಿ ಪ್ರವೀಣ್ ಚಂದ್ರ ಬಲ್ಲಾಳ್, ಪದ್ಮನಾಭ ರೈ, ಕೆ.ವಿ. ಭಟ್, ಪಯತೀರಾಜ್ ಶೆಟ್ಟಿ, ಚಂದ್ರಹಾಸ್ ಕಡಂಬಾರ್, ಲೋಕೇಶ್ ನೋಂಡ, ನಾರಾಯಣ್ ನಾಯ್ಕ್, ಕೃಷ್ಣ ಬೆಜ್ಜ,ಮೊದಲದವರು ಉಪಸ್ಥಿತರಿದ್ದರು. ನಾಗೇಶ್ ಬಳ್ಳೂರ್ ಸ್ವಾಗತಿಸಿ, ಚಂದ್ರಹಾಸ ಕಡಂಬಾರ್ ವಂದಿಸಿದರು.