ಉಪ್ಪಳ: ಪೈವಳಿಕೆ ಸಮೀಪದ ಕಯ್ಯಾರು ಕೊಂದಲಕಾಡು ನಿವಾಸಿ ಕರ್ನೆಲ್ ಕ್ರಾಸ್ತ (84) ಅವರು ದೀರ್ಘ ಕಾಲದ ಅಸೌಖ್ಯದಿಂದ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿದ್ದ ಇವರು, ಕೊಂದಲಕಾಡಿನ ತಮ್ಮ ಕೃಷಿಭೂಮಿಯಲ್ಲಿ ಕೃಷಿಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಪತ್ರಕರ್ತ ಸ್ಟೀಫನ್ ಕ್ರಾಸ್ತ(ಡೈಜಿ ವಲ್ರ್ಡ್ ) ಸೇರಿದಂತೆ ಮೂವರು ಮುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.