ಕಾಸರಗೋಡು: ಭಾರತೀಯ ಮೆಡಿಕಲ್ಸ್ ಏಂಡ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಶನ್(ಬಿಎಂಎಸ್-ಆರ್‍ಎಬಿಎಂಎಸ್)ಕುಟುಂಬ ಸಂಗಮ ಕಾರ್ಯಕ್ರಮ ಮಧೂರು ಪರಕ್ಕಿಲ ಗಟ್ಟಿ ಸಮಾಜ ಸಭಾಂಗಣದಲ್ಲಿ ಜರುಗಿತು.
ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ. ವಿ. ಬಾಬು ಕುಟುಂಬ ಸಂಗಮ ಉದ್ಘಾಟಿಸಿದರು. ಬಿಎಂಎಸ್ ಆರ್ ಎ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಹರಿಪ್ರಸಾದ್ ಮಧೂರು ಅಧ್ಯಕ್ಷತೆ ವಹಿಸಿದ್ದರು. ಆರ್‍ಎಸ್‍ಎಸ್ ಜಿಲ್ಲಾ ಕಾರ್ಯವಾಹ ಪವಿತ್ರನ್ ಕೆ.ಕೆ.ಪುರಂ, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಬಿಎಂಎಸ್‍ಆರ್‍ಎ ಜಿಲ್ಲಾ ಪ್ರಭಾರಿ ಕೆ.ಜೈದೀಪ್, ರಾಜ್ಯ ಸಮಿತಿ ಕಾರ್ಯದರ್ಶಿ ಬಿ.ಮನೀಷ್, ಬಿಎಂಎಸ್ ಜಿಲ್ಲಾಧ್ಯಕ್ಷ ಹಾಗೂ ಬಿಎಂಎಸ್‍ಆರ್‍ಎ ರಾಜ್ಯಾಧ್ಯಕ್ಷ ಕೆ.ಉಪೇಂದ್ರನ್ ಉಪಸ್ಥಿತರಿದ್ದರು. ಕೆ.ತೇಜಸ್ ಸ್ವಾಗತಿಸಿದರು. ಕೆ.ಅನಿಲ್ ವಂದಿಸಿದರು.