HEALTH TIPS

ಒಡಿಶಾದಲ್ಲಿ ಹಕ್ಕಿ ಜ್ವರ ಭೀತಿ: ಸಾವಿರಕ್ಕೂ ಹೆಚ್ಚು ಕೋಳಿಗಳ ಹತ್ಯೆ

         ವದೆಹಲಿ: ಒಡಿಶಾದಲ್ಲಿ ಹಕ್ಕಿ ಜ್ಚರ (H5N1) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾವಿರಕ್ಕೂ ಹೆಚ್ಚು ಕೋಳಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿರುವುದಾಗಿ ರಾಯಿಟರ್ಸ್‌ ವರದಿ ಮಾಡಿದೆ.

        ಹಕ್ಕಿ ಜ್ವರದ ಹೆಚ್ಚು ಪ್ರಕರಣಗಳು ಪುರಿ ಜಿಲ್ಲೆಯಲ್ಲಿ ವರದಿಯಾಗಿವೆ.

         ಈವರೆಗೆ 1,800 ಹಕ್ಕಿಗಳನ್ನು ಕೊಲ್ಲಲಾಗಿದೆ. ಮುಂದಿನ ದಿನಗಳಲ್ಲಿ 20 ಸಾವಿರ ಹಕ್ಕಿಗಳನ್ನು ಕೊಲ್ಲಲಿದ್ದೇವೆ ಎಂದು ರೋಗ ನಿಯಂತ್ರಣ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ.ಜಗನ್ನಾಥ್ ನಂದಾ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

         H5N1 ಹರಡುವ ರೋಗಕಾರವಾಗಿದ್ದು ಹೆಚ್ಚಾಗಿ ಹಂದಿ, ಕುದುರೆ, ದೊಡ್ಡ ಬೆಕ್ಕು. ನಾಯಿ ಮತ್ತು ಕೆಲವೊಮ್ಮೆ ಮನುಷ್ಯರಿಗೂ ಹರಡುವ ಸಾಧ್ಯತೆ ಇರುತ್ತದೆ.

              ಈ ವೈರಸ್‌ನ ಹರಡುವಿಕೆಯು ಕೋಳಿಗಳ ಸಂತಾನದ ಸಂಭಾವ್ಯ ನಾಶ, ಮಾನವ ಪ್ರಸರಣದ ಅಪಾಯ ಮತ್ತು ಸಂಭವನೀಯ ವ್ಯಾಪಾರ ನಿರ್ಬಂಧಗಳ ಕಾರಣದಿಂದಾಗಿ ಸರ್ಕಾರ ಮತ್ತು ಕೋಳಿ ಉದ್ಯಮ ಎರಡಕ್ಕೂ ಕಳವಳವನ್ನು ಸೃಷ್ಟಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries