ಜೆರುಸಲಂ: ಹಮಾಸ್ ಸೇನಾ ಮುಖ್ಯಸ್ಥ ಮೊಹಮ್ಮದ್ ಡೀಫ್‌ನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಯ ವಕ್ತಾರರು ಗುರುವಾರ ತಿಳಿಸಿದ್ದಾರೆ.
ಹಮಾಸ್‌ನ ಪರಮೋಚ್ಚ ನಾಯಕ ಇಸ್ಮಾಯಿಲ್ ಹನಿಯೆ (61) ಅವರನ್ನು ಇರಾನ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ಮತ್ತು ಬಂಡುಕೋರರ ಗುಂಪು ಬುಧವಾರ ಖಚಿತಪಡಿಸಿದ ಬೆನ್ನಲೇ ಇಸ್ರೆಲ್‌ನಿಂದ ಈ ಹೇಳಿಕೆ ಹೊರ ಬಿದ್ದಿದೆ.
ಜುಲೈ 13ರಂದು ಹಮಾಸ್ ಸೇನಾ ನಾಯಕ ಮೊಹಮ್ಮದ್ ಡೀಫ್ ಅನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಸೇನೆ ಭಾರೀ ವೈಮಾನಿಕ ದಾಳಿ ನಡೆಸಿತ್ತು. ಈ ವೇಳೆ ಡೀಫ್ ಮೃತಪಟ್ಟಿದ್ದಾರಾ? ಅಥವಾ ಇಲ್ಲವೇ? ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಇದೀ ಐಡಿಎಫ್ (ಇಸ್ರೇಲ್ ಪಡೆ) ಎಕ್ಸ್ ಪೋಸ್ಟ್ ಮೂಲಕ ಮೊಹಮ್ಮದ್ ಡೀಫ್ ಸಾವಿನ ವಿಚಾರವನ್ನು ದೃಢಪಡಿಸಿದೆ.