HEALTH TIPS

ಭೂಕುಸಿತದ ನೆಪದಲ್ಲಿ ಅತಿಕ್ರಮಣ ಮಾಡಿದ ರೈತರಿಗೆ ತೊಂದರೆಗಳಾದರೆ ವಿರೋಧಿಸುವುದಾಗಿ ಕ್ಯಾಥೋಲಿಕ್ ಕಾಂಗ್ರೆಸ್

               ಕೊಟ್ಟಾಯಂ: ಹಿಂದಿನ ಕಾಲಗಳಿಂದಲೂ ಪ್ರವಾಹ, ಭೂಕುಸಿತಗಳಾಗುತ್ತಿದ್ದು, ಅತಿಕ್ರಮಣದಾರರನ್ನು ದೂಷಿಸುವಂತಿಲ್ಲ ಎಂದು ಕ್ಯಾಥೋಲಿಕ್ ಕಾಂಗ್ರೆಸ್ ಹೇಳಿದೆ.

                   ವಯನಾಡಿನಲ್ಲಿ ಭೂಕುಸಿತಗಳು ರೈತರ ಭೂಮಿ ಅತಿಕ್ರಮಣದಿಂದ ಉಂಟಾಗಿಲ್ಲ. 1924ರಲ್ಲಿ ಕೇರಳದಲ್ಲಿ ಅತಿ ದೊಡ್ಡ ಪ್ರವಾಹ ಉಂಟಾಯಿತು. ಆಗ ಪಶ್ಚಿಮಘಟ್ಟದಲ್ಲಿ ಯಾವುದೇ ಅತಿಕ್ರಮಣ ಇರಲಿಲ್ಲ. ಆದ್ದರಿಂದ ಪ್ರವಾಹಕ್ಕೆ ಪಶ್ಚಿಮ ಘಟ್ಟಗಳ ಅತಿಕ್ರಮಣವೇ ಕಾರಣವಲ್ಲ ಎಂದು ಕ್ಯಾಥೋಲಿಕ್ ಕಾಂಗ್ರೆಸ್ ಪಾಲಾ ಡಯೋಸಿಸನ್ ನಿರ್ದೇಶಕ ಫಾದರ್ ಜಾರ್ಜ್ ವರ್ಗೀಸ್ ಅಂಜಾರಕ್ಕಲ್ ಹೇಳಿದ್ದಾರೆ.

                ಪಶ್ಚಿಮ ಘಟ್ಟಗಳ ಕುರಿತ ಗಾಡ್ಗೀಳ್ ವರದಿಯು ಅಪ್ರಾಯೋಗಿಕವೆಂದು ಸಾಬೀತಾಯಿತು. ಅದಕ್ಕಾಗಿಯೇ ಕಸ್ತೂರಿರಂಗನ್ ಸಮಿತಿಯನ್ನು ನೇಮಿಸಲಾಯಿತು. ವಯನಾಡು ದುರಂತದ ಅಧ್ಯಯನಕ್ಕೆ ರಾಜ್ಯ ಸರ್ಕಾರ ನೇಮಿಸಿದ ಡಾ. ಜಾನ್ ಮಥಾಯ್ ಅವರು ವಿವರವಾದ ಅಧ್ಯಯನ ಮಾಡಿದ್ದಾರೆ. ಅರಣ್ಯದಿಂದ ಹರಿದು ಬರುವ ಮರಗಳು ಸೇರಿ ವಿವಿಧ ವಸ್ತುಗಳು ತಡೆದು ಅಣೆಕಟ್ಟೆಯಂತಾಗಿದ್ದು, ನೀರು ತುಂಬಿ ಕುಸಿದು ಬೀಳುತ್ತಿರುವುದೇ ಅವಘಡಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಅತಿಕ್ರಮಣ ಮಾಡಿದ ರೈತರನ್ನು ಅನಾಹುತಕ್ಕೆ ದೂಷಿಸುವುದನ್ನು ಒಪ್ಪಲಾಗದು. ಭೂಕುಸಿತದ ನೆಪದಲ್ಲಿ ರೈತರಿಗೆ ಹಾನಿ ಮಾಡುವ ಇಂತಹ ಕ್ರಮಗಳನ್ನು ವಿರೋಧಿಸುವುದಾಗಿ ಕ್ಯಾಥೋಲಿಕ್ ಕಾಂಗ್ರೆಸ್ ಘೋಷಿಸಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries