ಕಾಸರಗೋಡು: ನೀರಿನ ಮೂಲಕ ಹರಡುವ ರೋಗಗಳಿಂದ ಅಪಾಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪಡನ್ನ ಗ್ರಾಮ ಪಂಚಾಯಿತಿಯಿಂದ ವಿಶಿಷ್ಟ ಅಭಿಯಾನ ಆರಂಭಿಸಲಾಯಿತು. ಆರೋಗ್ಯ ಇಲಾಖೆಯ ನಿರ್ದೇಶ ಪ್ರಕಾರ ಪಡನ್ನಗ್ರಾಪಂ ಒಂಬತ್ತನೇ ವಾರ್ಡು ಸದಸ್ಯ, ಚಲನಚಿತ್ರ ನಟರೂ ಆಗಿರುವ ಪಿ.ಪಿ. ಕುಞÂಕೃಷ್ಣನ್ ಅವರು ತಮ್ಮ ವಾರ್ಡಿನಲ್ಲಿ ಎಲ್ಲ ಕುಡಿಯುವ ನೀರಿನ ಮೂಲಗಳನ್ನು ಶುಚೀಕರಿಸುವ ಅಭಿಯಾನಕ್ಕೆ ಚಾಲನೆ ನೀಡಿದರು.
ಅಭಿಯಾನದ ಅಂಗವಗಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕುಡಿಯುವ ನೀರಿನ ಮೂಲಗಳನ್ನು ಶುಚೀಕರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಬಾವಿಗಳನ್ನು ಸೋಂಕುರಹಿತಗೊಳಿಸಲು ಕ್ಲೋರಿನೇಷನ್ ನಡೆಸುವ ಕರ್ಯಖ್ರಮ ನಡೆಸಲಾಯಿತು.
ಬಾವಿ ನೀರನ್ನು ಕ್ಲೋರಿನೇಶನ್ ನಡೆಸುವ ಪ್ರಕ್ರಿಯೆಗೆ ಗ್ರಾಪಂ ಸದಸ್ಯ ಪಿ.ಪಿ ಕುಞÂಕೃಷ್ಣನ್ ಚಾಲನೆ ನೀಡಿದರು. ಇ.ವಿ.ಚಿತ್ರಾ, ಕೆ. ಮಾಯಾ, ಎನ್.ಶಾಹಿದಾ, ಯು.ಲತಾ, ಎಂ.ವಿ.ಜಿಶಾ, ಸಿ.ಸುಶೀಲಾ, ಕೆ.ರಮಣಿ, ಟಿ.ವಿ.ವಿನೋದಿನಿ ನೇತೃತ್ವ ವಹಿಸಿದ್ದರು.