ನವದೆಹಲಿ: ಬಾಂಗ್ಲಾದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಪರಿಣಾಮವಾಗಿ ಅಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆ ಆಗಬಹುದು, ಸ್ಥಳೀಯ ಮಾರುಕಟ್ಟೆಯಲ್ಲಿ ಒಂದಿಷ್ಟು ಸಮಸ್ಯೆಗಳು ಸೃಷ್ಟಿಯಾಗಬಹುದು ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಕೃಷಿ ಅಭಿವೃದ್ಧಿ ಕುರಿತ ಅಂತರರಾಷ್ಟ್ರೀಯ ನಿಧಿಯ ಸಹ ಉಪಾಧ್ಯಕ್ಷೆ ಜ್ಯೋತ್ಸ್ನಾ ಪುರಿ ಹೇಳಿದ್ದಾರೆ.
ಹೂಡಿಕೆಗಳು ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಭಾವನೆಯು ಹೂಡಿಕೆದಾರರಲ್ಲಿ ಮೂಡಬಹುದು. ವಿದೇಶಿ ಹೂಡಿಕೆದಾರರಿಗೆ ಅವರ ಹೂಡಿಕೆಯು ಸುರಕ್ಷಿತ ಎಂಬ ಭಾವನೆ ಮೂಡಿಸಬೇಕು, ಹೂಡಿಕೆಯ ಹಣವು ಹಿಂದಕ್ಕೆ ಸಿಗುತ್ತದೆ ಎಂಬ ಭರವಸೆ ನೀಡಬೇಕು ಎಂದು ಜ್ಯೋತ್ಸ್ನಾ ಹೇಳಿದ್ದಾರೆ.
***
ಕೋಲ್ಕತ್ತ (PTI): ಕೋಲ್ಕತ್ತದ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ಬಾಂಗ್ಲಾದೇಶೀಯರ ಸಂಖ್ಯೆಯು ಬಿಕ್ಕಟ್ಟಿನ ಪರಿಣಾಮವಾಗಿ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದ ನಂತರದಲ್ಲಿ ರೋಗಿಗಳು ಚಿಕಿತ್ಸೆಗೆ ಬರುವ ಪ್ರಮಾಣವು ಕಡಿಮೆ ಆಗಿದೆ ಎಂದು ಅವರು ಹೇಳಿದ್ದಾರೆ. ಮಣಿಪಾಲ್ ಆಸ್ಪತ್ರೆ, ಫೊರ್ಟಿಸ್ ಹೆಲ್ತ್‌ಕೇರ್, ಅಪೋಲೊ ಆಸ್ಪತ್ರೆಗಳು ತಮ್ಮಲ್ಲಿಗೆ ಬರುವ ಬಾಂಗ್ಲಾ ರೋಗಿಗಳ ಸಂಖ್ಯೆ ಕಡಿಮೆ ಆಗಿದೆ ಎಂದು ತಿಳಿಸಿವೆ.
***
ಕೋಲ್ಕತ್ತ (PTI): ಬಾಂಗ್ಲಾದೇಶಿ ನಟ ಶಾಂತೊ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಅವರ ಹತ್ಯೆಗೆ ಕೋಲ್ಕತ್ತ ಸಿನಿಮೋದ್ಯಮ ಆಘಾತ ವ್ಯಕ್ತಪಡಿಸಿದೆ. ಸಲೀಂ ಅವರು ನಿರ್ಮಾಪಕರಾಗಿದ್ದರು. ಬಾಂಗ್ಲಾದಲ್ಲಿ ನಡೆಯುತ್ತಿರುವ ಗಲಭೆಗಳ ಸಂದರ್ಭದಲ್ಲಿ ತಂದೆ ಮತ್ತು ಮಗನನ್ನು ಹತ್ಯೆ ಮಾಡಲಾಗಿದೆ.