ಕೋಲ್ಕತ್ತ: ವೈದ್ಯಕೀಯ ವಿದ್ಯಾರ್ಥಿನಿ ಕೊಲೆ, ಅತ್ಯಾಚಾರ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಈ ನಡುವೆ ನಿನ್ನೆ ತಡ ರಾತ್ರಿ ಅಪರಿಚಿತರ ಗುಂಪೊಂದು ಆರ್. ಜಿ ಕರ್ ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದೆ.
ಕೋಲ್ಕತ್ತ: ವೈದ್ಯಕೀಯ ವಿದ್ಯಾರ್ಥಿನಿ ಕೊಲೆ, ಅತ್ಯಾಚಾರ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಈ ನಡುವೆ ನಿನ್ನೆ ತಡ ರಾತ್ರಿ ಅಪರಿಚಿತರ ಗುಂಪೊಂದು ಆರ್. ಜಿ ಕರ್ ಆಸ್ಪತ್ರೆಗೆ ನುಗ್ಗಿ ದಾಂಧಲೆ ಮಾಡಿದೆ.
ಪರಿಸ್ಥಿತಿ ಅವಲೋಕನಕ್ಕೆ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ ಆನಂದ ಬೋಸ್ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿದರು.
ಕಳೆದ ವಾರ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯ ಕೊಲೆ ಮತ್ತು ಅತ್ಯಾಚಾರ ನಡೆದಿತ್ತು. ಇದನ್ನು ಖಂಡಿಸಿ ಪ್ರತಿಭಟನೆಯಲ್ಲಿ ತೊಡಗಿರುವ ಕಿರಿಯ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಬೋಸ್ ಮಾತನಾಡಿದರು.
'ನಾನು ನಿಮ್ಮೊಂದಿಗಿದ್ದೇನೆ, ಎಲ್ಲರೂ ಸೇರಿ ಈ ಸಮಸ್ಯೆಯನ್ನು ಬಗೆಹರಿಸೋಣ. ನನ್ನ ಕಿವಿ ಮತ್ತು ಕಣ್ಣುಗಳು ತೆರೆದುಕೊಂಡೇ ಇವೆ' ಎಂದು ವಿದ್ಯಾರ್ಥಿಗಳ ಬಳಿ ಹೇಳಿದರು.