ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ 4ನೇ ವಾರ್ಡಿಗೊಳಪಟ್ಟ ಚಾಲತ್ತಡ್ಕ-ವಾಂತಿಚ್ಚಾಲ್ಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ಸೇತುವೆಯು ಕಳೆದ ಆರು ವರ್ಷಗಳಿಂದೀಚೆ ಕುಸಿದು ಹೋಗಿದ್ದು ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.
ನೂರಾರು ವಿದ್ಯಾರ್ಥಿಗಳು ದಿನನಿತ್ಯ ಶಾಲೆಗೆ ತೆರಳಲು ಇದೇ ರಸ್ತೆಯನ್ನು ಉಪಯೋಗಿಸಬೇಕಾದ ಅನಿವಾರ್ಯತೆಯಿದೆ. ಪಂಚಾಯಿತಿ ಅಧಿಕೃತರು ಕೂಡಲೇ ಕಾರ್ಯಪ್ರವೃತ್ತರಾಗಿ ನೂತನ ಕಿರು ಸೇತುವೆಗೆ ಅನುದಾನವನ್ನು ಒದಗಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಪಂಚಾಯಿತಿ ವಾರ್ಡು ಪ್ರತಿನಿಧಿ ಈಶ್ವರ ಮಾಸ್ತರ್ ಇವರ ನೇತೃತ್ವದಲ್ಲಿ ಊರವರು ಗ್ರಾಮಪಂಚಾಯಿತಿ ಅಧ್ಯಕ್ಷೆಗೆ ಮನವಿಯನ್ನು ನೀಡಿರುವರು.