ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್(ರಿ)ಕಾಸರಗೋಡು ಬದಿಯಡ್ಕ ವಲಯದ ನಿರ್ಚಾಲು ಕಾರ್ಯಕ್ಷೇತ್ರದ ಮಕರಂದ ಜ್ಞಾನವಿಕಸ ಕೇಂದ್ರದ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಗ್ರಾಮ ಪಂಚಾಯತಿ ಸದಸ್ಯೆ ಸೌಮ್ಯ ಮಹೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ತಾಲೂಕು ಅಧ್ಯಕ್ಷ ಅಖಿಲೇಶ್ ನಗುಮುಗಂ ಅವರು ಜ್ಞಾನವಿಕಾಸದ ಕಾರ್ಯಕ್ರಮಗಳು ಉತ್ತಮವಾಗಿ ಮೂಡಿಬಂದಿದೆ. ಮಹಿಳೆಯರ ಕಲಾ ಫ್ರೌಢಿಮೆಯನ್ನು ಪ್ರಸ್ತುತಪಡಿಸಲು ವೇದಿಕೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಬೇಳ ಕೌಮುದಿ ನೇತ್ರಾಲಯದ ಪ್ರಬಂಧಕಿ ರಶ್ಮಿ ಪ್ರಕಾಶ್ ಅವರು ಸರ್ಕಾರದಿಂದ ಜನರಿಗೆ ಲಭಿಸುವ ಸ್ವ-ಉದ್ಯೋಗದ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷೆ ಶಿವಾನಿ ಅತಿಥಿಗಳಾಗಿ ಉಪಸ್ಥಿತರಿದ್ದರು. ಕೇಂದ್ರದ ಸದಸ್ಯೆ ಮಮತಾ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರದ ಸದಸ್ಯರಿಗೆ ಆಯೋಜಿಸಿದ್ದ ಹೂಗುಚ್ಚ, ರಂಗೋಲಿ, ಹಾಡು ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸೌಮ್ಯ ಬಹುಮಾನ ವಿತರಿಸಿದರು. ಸೇವಾ ಪ್ರತಿನಿಧಿ ಬೇಬಿ ಕೇಂದ್ರದ ವರದಿ ಮಂಡಿಸಿದರು. ಕೇಂದ್ರದ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಸವಿತಾ ಸ್ವಾಗತಿಸಿ, ಅನುರಾಧ ವಂದಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.