ಕಲ್ಪಟ್ಟಾ: ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ಹತ್ತು ದಿನಗಳ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ ಸೇನೆಯು ಮುಂಡಕೈ ಮತ್ತು ಚುರಲ್ಮಲಾ ವಿಪತ್ತು ಪೀಡಿತ ಪ್ರದೇಶಗಳಿಂದ ಹಿಂದಿರುಗುತ್ತಿದೆ.
ಸೇನೆಯು ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿತು. ಸರ್ಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ತಂಡಕ್ಕೆ ಬೀಳ್ಕೊಡುಗೆ ನೀಡಲಾಯಿತು.
ಸೇನೆಯ 500 ಸದಸ್ಯರ ತುಕಡಿ ಹಿಂತಿರುಗುತ್ತಿದೆ. ಇನ್ನು ಬೈಲಿ ಸೇತುವೆ ಮತ್ತು ನಿರ್ವಹಣಾ ತಂಡ ಮಾತ್ರ ವಯನಾಡಿನಲ್ಲಿ ಉಳಿಯಲಿದೆ. ಸಚಿವರಾದ ಮುಹಮ್ಮದ್ ರಿಯಾಝ್ ಮತ್ತು ಎಕೆ ಶಶೀಂದ್ರನ್ ಅವರು ಸೇನೆಯ ಸೇವೆಗೆ ಧನ್ಯವಾದ ಅರ್ಪಿಸಿದರು. ಮುಂದಿನ ಸೂಚನೆ ಬರುವವರೆಗೂ ಹೆಲಿಕಾಪ್ಟರ್ ಶೋಧ ತಂಡ ಮುಂದುವರಿಯಲಿದೆ. ಉಳಿದವರು ಹಿಂತಿರುಗುತ್ತಾರೆ ಎಂದೂ ಸೇನೆ ಹೇಳಿದೆ.
ರಕ್ಷಣಾ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಅಗ್ನಿಶಾಮಕ ದಳ ಮತ್ತು ಪೋಲೀಸ್ ಪಡೆಗಳಿಗೆ ಹಸ್ತಾಂತರಿಸಲಾಗುವುದು ಎಂದು ಸೇನೆಯು ಮಾಹಿತಿ ನೀಡಿದೆ. ತಿರುವನಂತಪುರಂ, ಕೋಯಿಕ್ಕೋಡ್ ಮತ್ತು ಬೆಂಗಳೂರಿನ ಬೆಟಾಲಿಯನ್ ಸದಸ್ಯರು ಹಿಂತಿರುಗಿದರು. ಸೈನ್ಯವು ಎಲ್ಲಾ ಕಾರ್ಯಾಚರಣೆಯನ್ನು ಅತ್ಯುನ್ನತವಾಗಿ ನಿರ್ವಹಿಸಿ ಹಿಂತಿರುಗಿದೆ.