ಕಾಸರಗೋಡು: ಸಮುದ್ರದಲ್ಲಿ ಮೀನುಗಾರಿಕೆ ಮಧ್ಯೆ ಮೀನುಗಾರರ ಬಲೆಗೆ ಬೃಹತ್‍ಗಾತ್ರದ ಕಂಟೈನರ್ ಆಕಾರದ ವಸ್ತು ಸಿಲುಕಿಕೊಂಡಿದ್ದು, ಬೆಚ್ಚಿಬಿದ್ದ ಮೀನುಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕಂಟೈನರ್ ತಪಾಸಣೆ ನಡೆಸಿ ಇದು ಗ್ಯಾಸ್ ಕಂಟೈನರ್ ಆಗಿದ್ದು, ಹಡಗುಗಳಲ್ಲಿ ಫ್ರಿಡ್ಜ್‍ಗೆ ಅಳವಡಿಸುವ ಸಾಮಗ್ರಿ ಇದಾಗಿದೆ ಎಂದು ಮಾಹಿತಿ ಲಭಿಸಿದೆ.
ಮೊಗ್ರಾಲ್‍ಪುತ್ತೂರು-ಕಾಸರಗೋಡು ನಡುವಿನ ಸಮುದ್ರದಲ್ಲಿ ಮೀನುಗಾರರ ಬಲೆಗೆ ಕಂಟೈನರ್ ಸಿಲುಕಿಕೊಂಡಿದ್ದು, ಇದರಲ್ಲಿ ಚೀನೀ ಭಾಷೆಯಲ್ಲಿ ಕೆಲವೊಂದು ಬರಹ ಕಂಡುಬಂದಿದ್ದು, ಇದರಿಂದ ಮೀನುಗಾರರು ಮತ್ತಷ್ಟು ಆತಂಕಗೊಂಡಿದ್ದರು. ವಶಪಡಿಸಿಕೊಂಡ ಕಂಟೈನರನ್ನು ಪೊಲೀಸರು ಠಾಣೆಗೆ ಕೊಂಡೊಯ್ದಿದ್ದಾರೆ.