ಕಾಸರಗೋಡು: ಬಿರುಸಿನ ಗಾಳಿಗೆ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಅಡ್ಕಸ್ಥಳದಲ್ಲಿ ಬೃಹತ್ ಆಲದ ಮರದ ರೆಂಬೆ ಮುರಿದು ರಸ್ತೆಗೆ ಬಿದ್ದು, ತಾಸುಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.
ಶಾಲಾ ವಾಹನಗಳು ಸೇರಿದಂತೆ ತಾಸಿನ ವರೆಗೂ ವಾಹನಗಳು ಸಂಚಾರ ಸ್ಥಗಿತಗೊಂಡಿತ್ತು ನಂತರ ರಸ್ತೆಗೆ ಬಿದ್ದ ಮರ ತೆರವುಗೊಳಿಸಿದ ನಂತರ ಸಂಚಾರ ಸಉಗಗೊಳಿಸಲಾಯಿತು.
ಧರೆ ಕುಸಿದು ಹಾನಿ:
ಕಾಸರಗೋಡು ಮೀಪುಗುರಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸನಿಹದ ನಿವಾಸಿ ಜಯರಾಮ ಶೆಟ್ಟಿ ಎಂಬವರ ಮನೆ ಸನಿಹದ ಆವರಣಗೋಡೆ ಕುಸಿದು, ಮನೆಗೆ ಹಾನಿಯುಂಟಾಗಿದೆ.
1) ಅಡ್ಕಸ್ಥಳದಲ್ಲಿ ರಸ್ತೆಗೆ ಮರಬಿದ್ದು ತಾಸುಗಳ ಕಾಲ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.
2) ಆವರಣಗೋಡೆ ಕುಸಿದು ಕಾಸರಗೋಡು ಮೀಪುಗುರಿ ನಿವಾಸಿ ಜಯರಾಮ ಶೆಟ್ಟಿ ಎಂಬವರ ಮನೆಗೆ ಹಾನಿಯುಂಟಾಗಿದೆ.