ಮಂಜೇಶ್ವರ : ಕೇರಳ ತುಳು ಅಕಾಡಮಿ ವತಿಯಿಂದ ಪಾವೂರು ಸಮೀಪದ ಬಾಚಳಿಕೆಯಲ್ಲಿರುವ ಸ್ನೇಹಾಲಯದಲ್ಲಿ ಆಟಿ ತಿಂಗಳ ವಿಶೇಷ ಕಾರ್ಯಕ್ರಮ ‘ಆಟಿದ ಅಟ್ಟಣೆ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ತುಳು ಭಾಷೆ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ತುಳು ಅಕಾಡಮಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ತುಳು ಅಕಾಡಮಿ ಅಧ್ಯಕ್ಷ ಕೆ ಆರ್ ಜಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉದ್ಫಾಟಿಸಿದರು. ಸದಾಶಿವ ಶೆಟ್ಟಿ ಕುಳೂರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಾವರ ಶ್ರೀ ಅರಸು ಮಂಜಿಷ್ಣಾರು ಕ್ಷೇತ್ರದ ದೈವ ಪಾತ್ರಿ ರಾಜ ಬೆಲ್ಚಾಡ ಶುಭ ಹಾರೈಸಿ ಮಾತನಾಡಿದರು. ಜಿಲ್ಲಾಧಿಕಾರಿ ಇನ್ಭಾಶೇಖರ್ ಉಪಸ್ಥಿತರಿದ್ದು ಮಾತನಾಡಿದರು.
ಈ ಸಂದರ್ಭ ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೊ, ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಎಸ್, ಅಕಾಡೆಮಿ ಮಾಜಿ ಅಧ್ಯಕ್ಷ ನ್ಯಾಯವಾದಿ.ಸುಬ್ಬಯ್ಯ ರೈ, ಹಾಜಿರಾ ಮೂಸ, ರವೀಂದ್ರನಾಥ ಆಳ್ವ, ಸಂತೋಷ್ ಮಾಡ, ಡಾ. ಬಿ. ರಮೇಶ, ಪಿ ಆರ್ ಶೆಟ್ಟಿ ಕುಳೂರು, ಕೃಷ್ಣಪ್ಪ ಪೂಜಾರಿ, ಪದ್ಮನಾಭ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಆಟಿದ ತಿರ್ಲ್ ಕಾರ್ಯಕ್ರಮದಲ್ಲಿ ಭೋಜನಕ್ಕೆ ಹಲವು ಬಗೆಯ ತುಳುನಾಡಿನ ವಿವಿಧ ಖಾದ್ಯಗಳನ್ನು ತಯಾರಿಸ ಲಾಗಿತ್ತು. ನೂರಾರು ಸಂಖ್ಯೆಯ ಜನ ಈ ವಿಶಿಷ್ಟ ರೀತಿಯ ತಿನಿಸುಗಳ ರುಚಿಯನ್ನು ಸವಿದರು.
ಬಿರಿಂಡಾ ಸಾರ್, ಅನನಾಸ್ ಸಾರ್, ಕುಕ್ಕು ಸಾರ್, ಕುಡುತ ಸಾರ್, ತಿಮರೆ ಚಟ್ನಿ, ಕುಡು ಚಟ್ಟಿ ಜಂಜಕ್ ಚಟ್ಟಿ, ಬಿರಿಂಡಾ ಚಟ್ಟಿ, ಪೆಲಕಾಯಿ ಚಟ್ಟಿ, ಚೇವುದ ಇರೆತ ಚಟ್ಟಿ, ಪತ್ರೋಡೆ, ಉಪ್ಪಡ್ ಪನ್ನೀರ್, ಜಜಂಕ್ ತೊಪ್ಪು, ಬೇಳೆ ಸುಕ್ಕ, ಕೇನೆದ ಪುಂಡಿ, ನೀರ್ ದೋಸೆ, ಕಣಲೆ ಪದಂಗಿ ಗಸಿ, ಪುಂಡಿ ಗಸಿ, ತಜಂಕ್ ಅಂಬಡೆ, ಕಾಡುಕಂಚಲ ಪ್ರೈ, ರಾಗಿ ಮಣ್ಣಿ, ಮೆಂತೆ ಗಂಜಿ, ಬಂಗುಡೆ ಮೀನು ಸಾರ್, ಎಟ್ಟಿ ಚಟ್ಟಿ, ತೆಕ್ಕರೇ ತಲ್ಲಿ ಮೊದಲಾದ ಖಾದ್ಯಗಳಿದ್ದವು.
ಸಮಾರೋಪ ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯ ನ್ಯಾಯವಾದಿ ಚಂದ್ರಮೋಹನ್ ಸ್ವಾಗತಿಸಿ, ಅಜಿತ್ ಎಂ. ಸಿ ಲಾಲ್ ಭಾಗ್ ವಂದಿಸಿದರು. ಸದಸ್ಯರಾದ ಉದಯ ಸಾರಂಗ್ ಕಾರ್ಯಕ್ರಮವನ್ನು ನಿರೂಪಿಸಿದರು.