ಢಾಕಾ: ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಿರ್ವಹಿಸುವ ದೃಷ್ಟಿಯಿಂದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಹಿಂದೂ ವಿದ್ಯಾರ್ಥಿಗಳು ಮತ್ತು ಸಮುದಾಯದ ನಾಯಕರ ಸಭೆ ಕರೆದಿದ್ದಾರೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.

ಸದ್ಯದ ಬಿಕ್ಕಟ್ಟು ಮತ್ತು ಹಿಂದೂಗಳಿಗೆ ರಕ್ಷಣೆ ನೀಡುವ ಕುರಿತಂತೆ ಚರ್ಚೆ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ.
ಶೇಖ್ ಹಸೀನಾ ಸರ್ಕಾರ ಪತನವಾದ ದಿನದಿಂದ ಬಾಂಗ್ಲಾದ 53 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆದ ದಾಳಿಯ 205 ಘಟನೆಗಳು ವರದಿಯಾಗಿವೆ.
'ದೇಶದ ಕೆಲವು ಭಾಗಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ಕುರಿತಂತೆ ಗಂಭೀರ ಕಾಳಜಿಯಿಂದ ಗಮನ ಹರಿಸಲಾಗಿದೆ'ಎಂದು ಮಧ್ಯಂತರ ಸರ್ಕಾರ ತನ್ನ ಮೊದಲ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ದಾಳಿಗಳ ಕುರಿತಂತೆ ಆತಂಕ ಹೆಚ್ಚಾಗಿರುವ ಬೆನ್ನಲ್ಲೇ, ನಮ್ಮ ಹಕ್ಕುಗಳ ರಕ್ಷಣೆಗೆ ಅಲ್ಪಸಂಖ್ಯಾತರ ರಕ್ಷಣಾ ಕಾಯ್ದೆ ಜಾರಿಗೆ ತರಬೇಕೆಂದು ಅಲ್ಪಸಂಖ್ಯಾತ ಸಮುದಾಯಗಳು ಒತ್ತಾಯಿಸಿವೆ.
ಈ ನಡುವೆ ಸರ್ಕಾರದ ಮುಖ್ಯಸ್ಥ ಯೂನಸ್ ಮುಂದಿಡಲು ಎಂಟು ಅಂಶಗಳ ಪಟ್ಟಿಯನ್ನು ಹಿಂದೂ ವಿದ್ಯಾರ್ಥಿಗಳ ಸಮುದಾಯ ಸಿದ್ಧಪಡಿಸಿದೆ.
ಹಿಂದೂಗಳ ಮೇಲಿನ ದಾಳಿ ಪ್ರಕರಣಗಳ ತನಿಖೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ. ಅಲ್ಪಸಂಖ್ಯಾತರ ಭದ್ರತಾ ಕಾಯ್ದೆ ಜಾರಿ, ಹಿಂದೂ ಧಾರ್ಮಿಕ ಕಲ್ಯಾಣ ಟ್ರಸ್ಟ್ ಅನ್ನು ಫೌಂಡೇಶನ್ ಆಗಿ ಉನ್ನತೀಕರಿಸುವುದು, ಪಾಲಿ ಎಜುಕೇಶನ್ ಬೋರ್ಡ್ ಆಧುನೀಕರಣ, ದುರ್ಗಾ ಪೂಜೆ ಆಚರಣೆ ವೇಳೆ ಐದು ದಿನ ರಜೆ ಘೋಷಣೆ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸ್ಥಾಪನೆ ಪ್ರಮುಖ ಬೇಡಿಕೆಗಳಾಗಿವೆ..
ಈ ಹಿಂದೆ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸಿದ್ದ ಮೊಹಮ್ಮದ್ ಯೂನಸ್, ಘೋರ ಕೃತ್ಯ ಎಂದಿದ್ದರು. ಅಲ್ಲದೆ, ಅಲ್ಪಸಂಖ್ಯಾತ ಹಿಂದೂ, ಬೌದ್ಧ ಮತ್ತು ಕ್ರಿಶ್ಚಿಯನ್ ಸಮುದಾಯದ ಕುಟುಣಬಗಳ ರಕ್ಷಣೆಗೆ ಯುವಕರಿಗೆ ಕರೆ ನೀಡಿದ್ದರು.