ಇಂದೋರ್: ತನ್ನ ಮೊಬೈಲ್ ಬಳಸಿದ ಮಗನ ಮೇಲೆ ಕುಪಿತಗೊಂಡ ಮಹಿಳೆಯೊಬ್ಬಳು, ಕುಡುಗೋಲಿನಿಂದ ಹಲ್ಲೆ ನಡೆಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಇಂದೋರ್: ತನ್ನ ಮೊಬೈಲ್ ಬಳಸಿದ ಮಗನ ಮೇಲೆ ಕುಪಿತಗೊಂಡ ಮಹಿಳೆಯೊಬ್ಬಳು, ಕುಡುಗೋಲಿನಿಂದ ಹಲ್ಲೆ ನಡೆಸಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಇಲ್ಲಿನ ಸಿಮ್ರಾನ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಈ ಸಂಬಂಧ ಬಾಲಕನೊಬ್ಬ ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಾನೆ.
ಬಾಲಕನ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಲಾಗಿದೆ. ಆರೋಪಿ ಮಹಿಳೆಯನ್ನು ಈವರೆಗೆ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ದೂರುದಾರ ಬಾಲಕನು ಸದ್ಯ 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಶಾಲೆಯಿಂದ ಯಾವುದಾದರೂ ಸಂದೇಶಗಳು ಬಂದಿದ್ದಾವೆಯೇ ಎಂದು ತಿಳಿಯಲು ಆತ ತನ್ನ ತಾಯಿಯ ಮೊಬೈಲ್ ಬಳಸುತ್ತಿದ್ದ. ಆಗ, ತನ್ನ ಮೊಬೈಲ್ ಅನ್ನು ಏಕೆ ಮುಟ್ಟಿರುವೆ ಎಂದು ಪ್ರಶ್ನಿಸಿದ ಆಕೆ, ಕುಡುಗೋಲು ಬಳಸಿ ಹಲ್ಲೆ ನಡೆಸಿದ್ದಾಳೆ. ಘಟನೆಯಲ್ಲಿ ಬಾಲಕನ ಎಡಗೈಗೆ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ ಎಂದು ಸಿಮ್ರಾನ್ ಠಾಣಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.