ಬದಿಯಡ್ಕ: ಬದಿಯಡ್ಕ ಮರ್ಚೆಂಟ್ಸ್ ಆ್ಯಂಡ್ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಷನ್‍ನ ಆಶ್ರಯದಲ್ಲಿ 2024ನೇ ಸ್ವಾತಂತ್ರೋತ್ಸವ ದಿನಾಚರಣೆ ಇಂದು(ಆ 15) ಬೆಳಗ್ಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಹಿರಿಯ ವ್ಯಾಪಾರಿಗಳನ್ನು ಗೌರವಿಸುವ ಕಾರ್ಯಕ್ರಮ ಮತ್ತು 2023-24ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪ್ಲಸ್ ಟು ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಉತ್ತೀರ್ಣರಾದ ವ್ಯಾಪಾರಿ ಸದಸ್ಯರ ಮಕ್ಕಳಿಗೆ ಹಾಗೂ ವ್ಯಾಪಾರಿ ಸದಸ್ಯರ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಇದರ ಅಂಗವಾಗಿ ಬೆಳಿಗ್ಗೆ ಧ್ವಜಾರೋಹಣ, ಬಳಿಕ ಘಟಕ ಸದಸ್ಯರಿಂದ ಪೇಟೆಯಲ್ಲಿ ಮೆರವಣಿಗೆ ನಡೆಯಲಿದೆ. ಬದಿಯಡ್ಕ ಘಟಕದ ಅಧ್ಯಕ್ಷ ನರೇಂದ್ರ ಬಿ.ಎನ್. ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಸಿ.ರಾಜೇಂದ್ರ ಮುಖ್ಯ ಅತಿಥಿಯಾಗಿ ಮಾತನಾಡುವರು. ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಕುಂಞÂ ಕುಂಜಾರು, ಶಂಕರನಾರಾಯಣ ಮಯ್ಯ, ನಿರುಪಮಾ ಶೆಣೈ, ಸುಬ್ರಹ್ಮಣ್ಯ ಪೈ, ರಾಜು ಸ್ಟೀಫನ್ ಕ್ರಾಸ್ತಾ, ಅಬ್ದುಲ್ ಹಮೀದ್, ಉದಯಶಂಕರ, ವಿಶ್ವನಾಥ, ಕಾರ್ಯದರ್ಶಿ ರವಿ ನವಶಕ್ತಿ, ಬಿ.ಜ್ಞಾನದೇವ ಶೆಣೈ ಮುಂತಾದವರು ಶುಭಾಶಂಸನೆಗೆಯ್ಯುವರು.