ಮಂಜೇಶ್ವರ: ಹಿರಿಯ ಸಾಹಿತಿ ಸಂಘಟಕ ನಾಡಿಗೆ ನಮಸ್ಕಾರ ಖ್ಯಾತಿಯ ಪುಸ್ತಕ ಪ್ರಕಾಶಕ ಡಾ. ನಾ.ಮೊಗಸಾಲೆ ಅವರಿಗೆ ಪೌರಾಭಿನಂದನೆ ಹಾಗೂ ಸಾಹಿತ್ಯ ಸಮೀಕ್ಷೆ ಸಮಾರಂಭ ಮೀಯಪದವಿನ ಶ್ರೀವಿದ್ಯಾವರ್ದಕ ಉನ್ನತ ಪ್ರೌಢ ಶಾಲೆಯ ನಾರಾಯಣೀಯಂ ರಂಗ ಮಂದಿರದಲ್ಲಿ ಭಾನುವಾರ ಜರಗಿತು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ಶಂಪಾ ಪ್ರತಿμÁ್ಠನ ಬೆಂಗಳೂರು, ವಿಕಾಸ ಮೀಯಪದವು ಇವುಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮವನ್ನು ಕ.ಸಾ.ಪ ಬೆಂಗಳೂರು ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂಜೇಶ್ವರ ಗೋವಿಂದ ಪೈ ಹಾಗೂ ಕಯ್ಯಾರ ಕಿಞ್ಞಣ್ಣ ರೈಗಳ ಭಾವಚಿತ್ರ ಅನಾವರಣಗೊಳಿಸಲಾಯಿತು. ಕಾಸರಗೋಡು ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಕ.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಡಾ.ಮುರಳೀಮೋಹನ ಚುಂತಾರು, ಗಮಕ ಕಲಾ ಪರಿಷತ್ತಿನ ತೆಕ್ಕೆಕೆರೆ ಶಂಕರ ನಾರಾಯಣ ಭಟ್, ಕರ್ನಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀದರ ಬಳ್ಳುಕುರಾಯ ಮೊದಲಾದವರು ಮಾತನಾಡಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಡಾ.ನಾ.ಮೊಗಸಾಲೆ ದಂಪತಿಗಳಿಗೆ ಪೌರಾಭಿನಂದನೆ ನೀಡಿ ಗೌರವಿಸಲಾಯಿತು. ಬೆಟ್ಪಂಪಾಡಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಭಿನಂದನಾ ಭಾಷಣಗೈದರು. ಕ.ಸಾ.ಪ.ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸಭೆಯ ಅಧ್ಯಕ್ಷತೆವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಸಾಹಿತಿ ಹರಿಕೃಷ್ಣ ಭರಣ್ಯ, ರಾ.ಪ್ರವಿಜೇತ ಶಿಕ್ಷಕ ವಿಠಲ ಶೆಟ್ಟಿ ಬೇಲಾಡಿ ಮುಖ್ಯ ಅತಿಥಿಗಳಾಗಿದ್ದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಎಂ.ಉಮೇಶ್ ಸಾಲಿಯಾನ್, ಕನ್ನಡ ಭವನ ಗ್ರಂಥಾಲಯದ ವಾಮನ ರಾವ್ ಬೇಕಲ್, ರವಿ ನಾಯ್ಕಾಪು, ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ, ಕರಾವಳಿ ಸಾಂಸ್ಕøತಿಕ ಪ್ರತಿμÁ್ಠನದ ಅಧ್ಯಕ್ಷ ಶಿವರಾಮ ಕಾಸರಗೋಡು, ಜಯಲಕ್ಷ್ಮಿ ಕಾರಂತ, ಶ್ರೀಧರ ರಾವ್ ಆರ್.ಎಂ.ಸಭೆಯಲ್ಲಿ ಉಪಸ್ಥಿತರಿದ್ದರು. ಡಾ.ರಾಧಾಕೃಷ್ಣ ಬೆಳ್ಳೂರು ಸನ್ಮಾನ ಪತ್ರ ವಾಚಿಸಿದರು.
ಸಭಾ ಕಾರ್ಯಕ್ರಮಕ್ಕಿಂತ ಮೊದಲು ಮೊಗಸಾಲೆಯವರ ಸಾಹಿತ್ಯ ಸಮೀಕ್ಷೆ, ಕಾವ್ಯ ಗಾಯನ, ಸಂವಾದ ನಡೆಯಿತು. ಪ್ರೊ.ಪಿ.ಎನ್ ಮೂಡಿತ್ತಾಯ ಸ್ವಾಗತಿಸಿ, ವಿಶಾಲಾಕ್ಷ ಪುತ್ರಕಳ, ರಾಜರಾಮ ರಾವ್ ನಿರೂಪಿಸಿದರು.