ತಿರುವನಂತಪುರ: ವಂದೇಭಾರತ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ ನಡೆದಿದೆ. ಕಣ್ಣಪುರಂ ಮತ್ತು ಪೆರುಂಗೂಝಿ ನಡುವೆ ನಿನ್ನೆ ಸಂಜೆ 4.18ಕ್ಕೆ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ.
ಕಲ್ಲು ತೂರಾಟದಿಂದ ಸಿ4 ಕೋಚ್‌ನ ಸೀಟ್ ಸಂಖ್ಯೆ 74ರ ಮುಂಭಾಗದ ಗಾಜು ಒಡೆದಿದೆ. ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ರೈಲು ನಿಲ್ಲಿಸುವ ಅಗತ್ಯವಿರಲಿಲ್ಲ ಮತ್ತು ಪ್ರಯಾಣ ಮುಂದುವರೆಯಿತು.
ಕಳೆದ ತಿಂಗಳು ತ್ರಿಶೂರ್‌ನಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿತ್ತು. ಕಲ್ಲೆಸೆತದಿಂದ ಎರಡು ಬೋಗಿಗಳ ಗಾಜುಗಳು ಒಡೆದಿತ್ತು. ತಿರುವನಂತಪುರದಿAದ ಕಾಸರಗೋಡಿಗೆ ತೆರಳುತ್ತಿದ್ದ ರೈಲಿನ ಮೇಲೆ ದಾಳಿ ನಡೆದಿದೆ. ಸಿ2 ಮತ್ತು ಸಿ4 ಕೋಚ್‌ಗಳ ಗಾಜುಗಳು ಒಡೆದಿತ್ತು. ಆರೋಪಿಯನ್ನು ಆರ್‌ಪಿಎಫ್ ವಶಕ್ಕೆ ತೆಗೆದುಕೊಂಡಿದೆ. ಈ ದಾಳಿಯನ್ನು ಮಾನಸಿಕ ವಿಕಲಚೇತನರು ಮಾಡಿದ್ದಾರೆ ಎಂದು ಆರ್‌ಪಿಎಫ್ ಮಾಹಿತಿ ನೀಡಿದೆ. ವಂದೇಭಾರತ್ ರೈಲಿನ ಮೇಲೆ ಈ ಹಿಂದೆಯೂ ಇಂತಹ ದಾಳಿ ನಡೆದಿದೆ.