ರಿಯೊ ಡಿ ಜನೈರೊ: ಕೆಲವು 'ಎಕ್ಸ್' (ಟ್ವಿಟರ್) ಖಾತೆಗಳನ್ನು ಅಮಾನತುಗೊಳಿಸುವಂತೆ ಸೂಚಿಸಿದ್ದ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ 'ಎಕ್ಸ್' ಕಾರ್ಯಾಚರಣೆಗೆ ಬ್ರೆಜಿಲ್‌ನಲ್ಲಿ ನಿರ್ಬಂಧ ಹೇರಲಾಗಿದೆ ಎಂದು ವರದಿಯಾಗಿದೆ.

ಬ್ರೆಜಿಲ್‌ನಲ್ಲಿ 'ಎಕ್ಸ್' ಕಂಪನಿಯು ಅಗತ್ಯ ಕಾನೂನು ನಿಯಮಗಳನ್ನು ಪಾಲಿಸದ ಕಾರಣ ದೇಶದಾದ್ಯಂತ 'ಎಕ್ಸ್' ಕಾರ್ಯಾಚರಣೆಗೆ ನಿರ್ಬಂಧ ಹೇರಲು ಟೆಲಿಕಾಂ ಏಜೆನ್ಸಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಲೆಕ್ಸಾಂಡ್ರೆ ಡಿ ಮೊರಯಿಸ್ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ದೇಶದ ಕಾನೂನುಗಳನ್ನು ಉಲ್ಲಂಘಿಸಿದ 'ಎಕ್ಸ್' ಖಾತೆಗಳನ್ನು ಅಮಾನತುಗೊಳಿಸುವಂತೆ ಸೂಚಿಸಿದ್ದ ಆದೇಶವನ್ನು ನಿರ್ಲಕ್ಷಿಸಿದ್ದಕ್ಕಾಗಿ ನ್ಯಾಯಮೂರ್ತಿ ಡಿ ಮೊರಯಿಸ್ ಅವರು ಕಂಪನಿಗೆ ಕಳೆದ ವಾರ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮಸ್ಕ್ ಬ್ರೆಜಿಲ್‌ನಲ್ಲಿ ಎಕ್ಸ್ ಕಚೇರಿಯನ್ನು ಮುಚ್ಚಿದ್ದರು.
'ಡಿ ಮೊರಯಿಸ್ ಆದೇಶಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ. ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಳಹದಿಯಾಗಿದೆ. ಬ್ರೆಜಿಲ್‌ನಲ್ಲಿ ನ್ಯಾಯಾಧೀಶರು ರಾಜಕೀಯ ಉದ್ದೇಶಗಳಿಗಾಗಿ ಅದನ್ನು ನಾಶಪಡಿಸುತ್ತಿದ್ದಾರೆ' ಎಂದು ಮಸ್ಕ್ ಕಿಡಿಕಾರಿದ್ದರು.