ಕುಂಬಳೆ: ಬಾಡೂರು ಪದವು ಶ್ರೀಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಡೆಯಿತು. ವಿವಿಧ ಸ್ಪರ್ಧೆಗಳು, ಭಜನೆ, ವರ್ಣರಂಜಿತ ಮೆರವಣಿಗೆ ಇತ್ಯಾದಿ ನಡೆದುವು. ಈ ಸಂಬಂಧ ನಡೆದ ಸಭಾ ಕಾರ್ಯಕ್ರಮದಲ್ಲಿ ಪತ್ರಕರ್ತ ವೀಜಿ.ಕಾಸರಗೋಡು ಧಾರ್ಮಿಕ ಭಾಷಣ ಮಾಡಿದರು. ಬಾಡೂರು ನಿವಾಸಿ, ಯುವ ವೈದ್ಯೆ ಡಾ.ತಸ್ರೀನಾ ಅವರಿಗೆ ಅಭಿನಂದನೆ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಮಂದಿರದ ಉಪಾಧ್ಯಕ್ಷ ಬಿ.ಎನ್.ಪದ್ಮನಾಭ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಾಜು ಕಿದೂರು ಮುಖ್ಯ ಅತಿಥಿಯಾಗಿದ್ದರು. ದೈವ ಪಾತ್ರಿ ಹರೀಶ್, ಪುತ್ತಿಗೆ ಗ್ರಾಮ ಪಂಚಾಯತಿ ಸದಸ್ಯ ಕೇಶವ ಎಸ್.ಆರ್. ಇದ್ದರು. ಬಾಲಕೃಷ್ಣ ಬಾಡೂರು ಸ್ವಾಗತಿಸಿದರು. ದಯಾನಂದ ವಂದಿಸಿದರು.