ಕಾಸರಗೋಡು : ಜಿಲ್ಲಾ ನ್ಯಾಯಾಲಯದಲ್ಲಿ ಕಳವಿಗೆ ಯತ್ನಿಸಿದ ಪ್ರಕರಣದ ಆರೋಪಿ ಕೋಯಿಕ್ಕೋಡ್ ತೊಟಿಲ್‍ಪಾಲಂ ನಿವಾಸಿ ಸನೀಷ್ ಜಾರ್ಜ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಪಿ. ಬಿಜೋಯ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿದ್ಯಾನಗರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಇದಾಗಿದ್ದು, ಪ್ರಕರಣದ ತೀವ್ರ ತನಿಖೆಗಾಗಿ ಕಾಸರಗೋಡು ಡಿವೈಎಸ್ಪಿ ಹಾಗೂ ವಿದ್ಯಾನಗರ ಎಸ್‍ಎಚ್‍ಒ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖಾ ತಂಡವು ಆಯಕಟ್ಟಿನ, ವ್ಯವಸ್ಥಿತ ಮತ್ತು ವೈಜ್ಞಾನಿಕ ತನಿಖೆಯನ್ವಯ ಈ ಪ್ರಕರಣದ ಆರೋಪಿಯನ್ನು ಅಂಗಮಾಲಿಯಿಂದ ಬಂಧಿಸಲಾಗಿದೆ. ದರೋಡೆ ಯತ್ನ ನಡೆದ ಅದೇ ದಿನ ಆರೋಪಿ ವಿದ್ಯಾನಗರ ನಾಯನ್ಮಾರ್‍ಮೂಲೆಯ ಹೈಯರ್ ಸೆಕೆಂಡರಿ ಶಾಲೆ ಹಾಗೂ ಚೆಂಗಳದ ಮರದ ಕಾರ್ಖಾನೆಯಿಂದ ನಗದು ಕಳವುಪ್ರಕರಣದಲ್ಲೂ ಈತ ಶಾಮೀಲಾಗಿದ್ದಾನೆ. ವಿದ್ಯಾನಗರ ಪೆÇಲೀಸ್ ಇನ್ಸ್‍ಪೆಕ್ಟರ್ ಯು.ಪಿ. ವಿಪಿನ್. ನೇತೃತ್ವದಲ್ಲಿ ವಿದ್ಯಾನಗರ ಠಾಣೆ ಸಬ್ ಇನ್ಸ್ ಪೆಕ್ಟರ್‍ಗಳಾದ ವಿ. ರಾಮಕೃಷ್ಣನ್, ವಿಜಯನ್ ಮೇಲತ್, ಸಿಸಿ ಬಿಜು, ಕಾಸರಗೋಡು ಬೆರಳಚ್ಚು ತಜ್ಞ ಪಿ. ನಾರಾಯಣನ್, ಎಎಸ್‍ಐ ವಿ.ಕೆ.ಪ್ರಸಾದ್, ಸೀನಿಯರ್ ಸಿವಿಲ್ ಪೆÇಲೀಸ್ ಅಧಿಕಾರಿಗಳಾದ ಅಬ್ದುಲ್ ಸಲಾಂ, ಪಿ.ರೋಜನ್, ಎಂ.ಟಿ.ರಾಜೇಶ್, ಸಿವಿಲ್ ಪೆÇಲೀಸ್ ಅಧಿಕಾರಿಗಳಾದ ಕೆ.ಸಿ.ಶಿನೋಯ್, ವಿ.ವಿ.ಶ್ಯಾಮಚಂದ್ರನ್, ಗಣೇಶ್ ಕುಮಾರ್, ಕೆ.ವಿ.ಅಜಿತ್ (ಹೊಸದುರ್ಗ ಪೆÇಲೀಸ್ ಠಾಣೆ) ಕಾಸರಗೋಡು ಸೈಬರ್ ಸೆಲ್ ಸಿವಿಲ್ ಪೆÇಲೀಸ್ ಅಧಿಕಾರಿ ಹರಿಪ್ರಸಾದ್ ತನಿಖಾ ತಂಡದಲ್ಲಿದ್ದರು ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ಕಾಸರಗೋಡು ಹೆಚ್ಚುವರಿ ಎಸ್.ಪಿ.ಪಿ. ಬಾಲಕೃಷ್ಣನ್ ನಾಯರ್ ಉಪಸ್ಥಿತರಿದ್ದರು.