ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಪಾಪ್ಯುಲರ್ ಫ್ರಂಟ್ ವಿರುದ್ಧ ಪೋಲೀಸರು ಮತ್ತು ಕೇಂದ್ರೀಯ ಏಜೆನ್ಸಿಗಳು ದಾಖಲಿಸಿರುವ ಪ್ರಕರಣಗಳ ಸ್ಥಿತಿಯನ್ನು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಮೌಲ್ಯಮಾಪನ ಮಾಡಿದೆ.
2022ರ ಸೆಪ್ಟೆಂಬರ್‌ನಿAದ ದಾಖಲಾಗಿರುವ ಪ್ರಕರಣಗಳನ್ನು ಐಬಿ ಮತ್ತು ಪೊಲೀಸ್ ಹಾಗೂ ಎನ್ ಐ ಎ ಕರೆದಿರುವ ಸ್ಟ್ಯಾಂಡಿAಗ್ ಪೋಕಸ್ ಗ್ರೂಪ್ (ಎಸ್ ಎಫ್ ಜಿ) ಸಭೆಯು ಪರಿಶೀಲಿಸಿತು.
ಮಾಹಿತಿಯ ಪ್ರಕಾರ, ಜೈಲಿನಲ್ಲಿರುವ ಪಿಎಫ್‌ಐ ಭಯೋತ್ಪಾದಕರನ್ನು ಭೇಟಿ ಮಾಡಿದವರ ವಿವರಗಳು, ಪರಾರಿಯಾಗಿರುವವರು ಮತ್ತು ದೇಶ ತೊರೆದವರನ್ನು ಬಂಧಿಸುವ ಪ್ರಯತ್ನಗಳು ಸೇರಿದಂತೆ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಭಯೋತ್ಪಾದಕರನ್ನು ಇರಿಸಲಾಗಿರುವ ಸೆಲ್‌ಗಳಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಸಲಾಗುತ್ತಿದೆಯೇ ಮತ್ತು ಪಿಎಫ್‌ಐ ಭಯೋತ್ಪಾದಕರು ಬೇರೆ ಸಂಘಟನೆಗಳಿಗೆ ಸೇರಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
ಜೈಲಿನಲ್ಲಿ ಭಯೋತ್ಪಾದಕರನ್ನು ಭೇಟಿ ಮಾಡಿದವರ ವಿವರ, ಎಷ್ಟು ಮಂದಿಗೆ ಜಾಮೀನು ನೀಡಲಾಗಿದೆ ಮತ್ತು ಯಾವ ಕಾರಣಕ್ಕೆ ಜಾಮೀನು ನೀಡಲಾಗಿದೆ ಎಂಬ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುವAತೆ ಐಬಿ ಪೊಲೀಸರಿಗೆ ಸೂಚಿಸಿತ್ತು. ಕಳೆದ ಮೂರು ವರ್ಷಗಳಲ್ಲಿ ಪಿಎಫ್‌ಐ ವಿರುದ್ಧ ಎನ್‌ಐಎ ಹಲವು ಪ್ರಕರಣಗಳನ್ನು ದಾಖಲಿಸಿದೆ. ಸಾಕ್ಷ್ಯ ಸಂಗ್ರಹದ ಭಾಗವಾಗಿ ಬಿಹಾರ, ಉತ್ತರ ಪ್ರದೇಶ, ಪಂಜಾಬ್, ಗೋವಾ, ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ತಪಾಸಣೆ ನಡೆಸಲಾಗಿದೆ.
ಬಂಧಿತ ಪಿಎಫ್‌ಐ ಭಯೋತ್ಪಾದಕರು ಭಯೋತ್ಪಾದಕ ಚಟುವಟಿಕೆಗಳಿಗೆ ಯೋಜನೆ ರೂಪಿಸಿ, ತರಬೇತಿ ನೀಡಿ ನೇಮಕ ಮಾಡಿಕೊಂಡವರು ಎಂದು ಕೇಂದ್ರ ಸಂಸ್ಥೆಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಇದು ಧಾರ್ಮಿಕ ವೈಷಮ್ಯಕ್ಕೆ ದಾರಿ ಮಾಡಿಕೊಟ್ಟು ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಅವರು ಹೇಳಿದರು.