ಬದಿಯಡ್ಕ: ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಸದಸ್ಯತ್ವ ಅಭಿಯಾನದ ಪಂಚಾಯತಿ ಮಟ್ಟದ ಪ್ರಶಿಕ್ಷಣ ವರ್ಗ ಮವ್ವಾರು ಪಕ್ಷದ ಕಾರ್ಯಲಯದಲ್ಲಿ ಜರಗಿತು.
ಕಾರ್ಯಕ್ರಮವನ್ನು ದೇಶಿಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು. ಸದಸ್ಯತ್ವ ಅಭಿಯಾನದ ಬಗ್ಗೆ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ ಮಾಹಿತಿ ನೀಡಿದರು. ಬಿಜೆಪಿ ಪಂಚಾಯಿತಿ ಸಮಿತಿಯ ಅಧ್ಯಕ್ಷ ಹರೀಶ್ ಗೋಸಾಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಹಾಗೂ ಪಂಚಾಯಿತಿ ಪ್ರಭಾರಿ ಶಿವಕೃಷ್ಣ ಭಟ್ ಪಕ್ಷದ ಚಟುವಟಿಕೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಚುನಾಯಿತ ಸದಸ್ಯರು, ವಿವಿಧ ಮೋರ್ಚಾಗಳ ನೇತಾರರು ಹಾಗೂ ಬೂತ್ ಅಧ್ಯಕ್ಷರು, ಮೇಲ್ಪಟ್ಟ ಪ್ರಮುಖರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೆಮೂಲೆ ಸ್ವಾಗತಿಸಿ, ಕಾರ್ಯದರ್ಶಿ ರೋಶಿನಿ ಪೆÇಡಿಪ್ಪಳ ವಂದಿಸಿದರು.