ಕೋಝಿಕ್ಕೋಡ್: ಕರಿಪ್ಪೂರ್ ನಿಂದ ಮಸ್ಕತ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ನಡೆಸಿದೆ. ತಾಂತ್ರಿಕ ವೈಫಲ್ಯದ ಕಾರಣ ತುರ್ತು ಲ್ಯಾಂಡಿಂಗ್ ಮಾಡಲಾಯಿತೆಂದು ತಿಳಿದುಬಂದಿದೆ.
150ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ಬುಧವಾರ 11:30ಕ್ಕೆ ವಿಮಾನ ಹೊರಟಿತ್ತು. ಬಳಿಕ ಒಂದೂವರೆ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಯಿತು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದರು. ಬದಲಿ ವಿಮಾನವನ್ನು ಸಿದ್ಧಪಡಿಸಿ ಕಳಿಸಲಾಯಿತು. ಮಸ್ಕತ್‍ನಿಂದ ಸಂಪರ್ಕ ಟಿಕೆಟ್ ಹೊಂದಿರುವವರಿಗೆ ಬದಲಿ ವ್ಯವಸ್ಥೆಯನ್ನು ಸಿದ್ಧಪಡಿಸಲಾಯಿತು.