ಕುಂಬಳೆ: ಧರ್ಮತ್ತಡ್ಕ ಶ್ರೀದುರ್ಗಾಪರಮೇಶ್ವರಿ ಶಾಲೆಯ ಸಭಾಂಗಣದಲ್ಲಿ ಹೈಸ್ಕೂಲ್ ಮಟ್ಟದ ಸಮಾಜ ವಿಜ್ಞಾನ ಮೇಳ ಮಂಗಳವಾರ ನಡೆಯಿತು. ವ್ಯವಸ್ಥಾಪಕ ಶಂಕರನಾರಾಯಣ ಭಟ್ ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆ ನೆರವೇರಿಸಿದರು. ಮುಖ್ಯೋಪಾಧ್ಯಾಯ ಗೋವಿಂದ ಭಟ್ ಸಮಾಜ ವಿಜ್ಞಾನೋತ್ಸವದ ಉದ್ದೇಶ ಹಾಗೂ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಮಹತ್ವವನ್ನು ವಿವರಿಸಿದರು. ನೌಕರ ಸಂಘದ ಕಾರ್ಯದರ್ಶಿ ಶಶಿಕುಮಾರ್ ಪಿ, ಸಮಾಜ ವಿಜ್ಞಾನ ಅಧ್ಯಾಪಿಕೆ ಸುನಿತ.ಕೆ, ವಿದ್ಯಾಸರಸ್ವತಿ, ಅಧ್ಯಾಪಕರಾದ ಶಶಿಧರ್ ಕೆ, ರಾಜಕುಮಾರ ಕೆ. ಶುಭಹಾರೈಸಿದರು.10 ನೆ ತರಗತಿಯ ವಿದ್ಯಾರ್ಥಿನಿ ಮನ್ನಿಪ್ಪಾಡಿ ವೈಷ್ಣವಿ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರುತಿಕಲಾ ವಂದಿಸಿದರು. ಅನನ್ಯ ಭಟ್ ನಿರೂಪಿಸಿದರು. ಸಮಾಜವಿಜ್ಞಾನ ಅಧ್ಯಾಪಕ ಶಿವಪ್ರಸಾದ್ ಸಿ ಮತ್ತು ವಿಚೇತ ಬಿ ಸಹಕರಿದರು.