ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾಣ ವಠಾರದಲ್ಲಿ ನಡೆಯಲಿರುವ 44ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿಯ ಧ್ವಜ ದಿನದ ಅಂಗವಾಗಿ ಬಾಲಗೋಕುಲ ನಗರ ಸಮಿತಿ ವತಿಯಿಂದ ಧ್ವಜಾರೋಹಣ ನಡೆಸಲಾಯಿತು.
ಬಾಲಗೋಕುಲ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಧ್ವಜಾರೋಹಣ ನಡೆಸಿದರು. ಸಮಾರಂಬದಲ್ಲಿ ವಿಶ್ವ ಹಿಂದೂ ಪರಿಷತ್ ಕಾಸರಗೋಡು ನಗರ ಸಮಿತಿ ಗೌರವಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಗೋಕುಲ್ ಪ್ರಮುಖ್ ಜಯರಾಮ ಶೆಟ್ಟಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಕಾಯಂ ಸಮಿತಿ ಸಂಚಾಲಕ ಕೆ.ಎನ್. ರಾಮಕೃಷ್ಣ ಹೊಳ್ಳ, ಜನ್ಮಾಷ್ಟಮಿ ಉಪಾಧ್ಯಕ್ಷ ಕಿಶೋರ್ ಕುಮಾರ್, ವಿಶ್ವ ಹಿಂದೂ ಪರಿಷತ್ ಕಾಸರಗೋಡು ನಗರ ಕಾರ್ಯದರ್ಶಿ ಗಣೇಶ್ ಬೀರಂತಬೈಲು ಹಾಗೂ ಬಾಲಗೋಕುಲ ಮಕ್ಕಳು ಪಾಲ್ಗೊಂಡಿದ್ದರು.