ಕಾಸರಗೋಡು: ನಗರ ಹಾಗೂ ಹೊರವಲಯದ ತಳಂಗರೆ, ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಅಲೆಮಾರಿ ಜಾನುವಾರುಗಳಿಂದ ಪಾದಚಾರಿಗಳಿಗೆ ಹಾಗೂ ವಾಹನಚಾಲಕರಿಗೆ ಸಮಸ್ಯೆ ಎದುರಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಅಲೆದಾಡುತ್ತಿರುವ ಜಾನುವಾರುಗಳನ್ನು ವಶಕ್ಕೆ ತೆಗೆದು, ಅದರ ಮಾಲೀಕರಿಂದ ದಂಡ ವಸೂಲಿ ಅಥವಾ ಅಂತಹ ಜಾನುವಾರುಗಳನ್ನು ಹರಾಜು ಹಾಕುವುದು ಸೇರಿದಂತೆ ಇತರ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.