ಕುಂಬಳೆ: ಪೆರ್ಮುದೆ ಸೈಂಟ್ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ಇಗರ್ಜಿ ವಾರ್ಷಿಕ ಸಮಾರಂಭ ಭಾನುವಾರ ಜರುಗಿತು. ಈ ಸಂದರ್ಭ ದಿವ್ಯ ಬಲಿಪೂಜೆಗೆ ಬೇಳ ಶೋಕಮಾತಾ ಇಗರ್ಜಿ ಧರ್ಮಗುರು ವಂದನೀಯ ಫಾದರ್ ಸ್ಟ್ಯಾನಿ ಪಿರೇರಾ ನೆರವೇರಿಸಿದರು.
ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂದನೀಯ ಫಾದರ್ ವಿಶಾಲ್ ಮೋನಿಸ್, ಫಾದರ್ ಅರುಣ್ ಡಿ.ಸೋಜ, ಫಾದರ್ ಸಉನಿಲ್ ಡಿ. ಸೋಜ, ಫಾದರ್ ಪ್ರಶಾಂತ್ ಪಿಂಟೋ, ಫಾದರ್ ವಿಜಯ್ ಡಿ. ಸಓಜ, ಫಾದರ್ ಅರುಣ್, ಪೆರ್ಮುದೆ ಇಗರ್ಜಿ ಧರ್ಮಗುರು ಫಾದರ್ ಹೆರಾಲ್ಡ್ ಡಇ.ಸೋಜ, ಸಹಾಯಕ ಧರ್ಮಗುರು ಫಾದರ್ ಕ್ಲೋಡ್ ಕೋರ್ಡಾ ಉಪಸ್ಥಿತರಿದ್ದರು.
ಈ ಸಂದರ್ಭ ಲಾರೆನ್ಸ್ ಗ್ರೊಟ್ಟೋಗೆ ತೆರಳಿ ವಇಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಇಗರ್ಜಿ ಪಾಲನಾ ಸಮಿತಿ ಉಪಾಧ್ಯಕ್ಷ ಡೋರಿನ್ ಪಿರೇರಾ, ಕಾರ್ಯದರ್ಶಿ ಲ್ಯಾನ್ಸಿ ಡಿ.ಸೋಜ ಮೊದಲಾದವರು ಉಪಸ್ಥಿತರಿದ್ದರು.