HEALTH TIPS

ಲಂಡನ್: ಏರ್ ಇಂಡಿಯಾದ ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ಕಿರುಕುಳ, ಹಲ್ಲೆ

 ವದೆಹಲಿ/ಮುಂಬೈ: ಲಂಡನ್‌ನಲ್ಲಿ ಹೋಟೆಲ್‌ವೊಂದರಲ್ಲಿ ತಂಗಿದ್ದ ಏರ್ ಇಂಡಿಯಾದ ಮಹಿಳಾ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿದ್ದಾನೆ.

ಈ ಬಗ್ಗೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ದೂರು ದಾಖಲಿಸಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಈ ವಾರದ ಆರಂಭದಲ್ಲಿ ಲಂಡನ್‌ನ ಹೋಟೆಲ್‌ವೊಂದರಲ್ಲಿ ನಮ್ಮ ಸಿಬ್ಬಂದಿ ಉಳಿದುಕೊಂಡಿದ್ದರು. ಹೋಟೆಲ್‌ ಭದ್ರತೆಯನ್ನು ಬೇಧಿಸಿ ವ್ಯಕ್ತಿಯೊಬ್ಬ ಒಳಗೆ ಪ್ರವೇಶ ಮಾಡಿ ನಮ್ಮ ಸಿಬ್ಬಂದಿ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಸಂಸ್ಥೆ ದೂರಿನಲ್ಲಿ ತಿಳಿಸಿದೆ.

ಆ ವ್ಯಕ್ತಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಅವರು ಕೂಗಿಕೊಂಡಿದ್ದಾರೆ. ತಕ್ಷಣಕ್ಕೆ ಕೆಲವರು ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಹಾಗೂ ಆರೋಪಿಯನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries