ಕುಂಬಳೆ: ರೋಟರಿ ಕ್ಲಬ್ ಕಾಸರಗೋಡು ನಡೆಸಿದ ಹೈಸ್ಕೂಲ್ ವಿಭಾಗದ ಜಿಲ್ಲಾ ಮಟ್ಟದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ತಂಡ ದ್ವಿತೀಯ ಸ್ಥಾನಗಳಿಸಿ ಪ್ರಮಾಣ ಪತ್ರ ಮತ್ತು ನಗದು ಬಹುಮಾನವನ್ನು ಪಡೆದಿದೆ. ಜಯಗಳಿಸಿದ ವರ್ಷಾ ಬಿ, ಶ್ರದ್ಧಾ ಎ.ಎಸ್, ನಿರೀಕ್ಷಾ ಸಿ ಎಚ್, ಅಮೃತ, ಅಂಜಲಿ ಎಲ್ ಜೆ, ಫಾತಿಮತ್ ಶಾಹಿಮ, ಸಹನ ಕೆ ಅವರನ್ನು ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ.