ಬದಿಯಡ್ಕ: ಬದಿಯಡ್ಕ ಪೇಟೆಯನ್ನು ಹಸಿರಾಗಿಸುವ ಯೋಜನೆಗೆ ಜೆ.ಸಿ.ಐ. ಬದಿಯಡ್ಕ ಟೌನ್ ಚಾಲನೆ ನೀಡಿತು. ಇದರ ಅಂಗವಾಗಿ ಬದಿಯಡ್ಕ ಪೇಟೆಯ ಡಿವೈಡರ್‍ನಲ್ಲಿ ಹೂ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಬದಿಯಡ್ಕ ಜನ ಮೈತ್ರಿ ಪೋಲೀಸ್ ವಿಭಾಗದ ಬೀಟ್ ಆಫೀಸರ್ ಶೀನು ಗಿಡಗಳನ್ನು ನೆಡುವುದರ ಮೂಲಕ ಉದ್ಘಾಟಿಸಿದರು. ಇದು ಪೇಟೆಯ ಡಿವೈಡರಿನಲ್ಲಿ ಹೂ ಗಿಡಗಳನ್ನು ನೆಡುವುದರೊಂದಿಗೆ ಪೇಟೆಯನ್ನು ಮನೋಹರಗೊಳಿಸುವ ಯೋಜನೆಯಾಗಿದೆ.
ಬದಿಯಡ್ಕ ಜೆಸಿಐ ಅಧ್ಯಕ್ಷ ಶರತ್ ಕುಮಾರ್, ಕೋಶಾಧಿಕಾರಿ ಚಂದ್ರಶೇಖರ್, ಸದಸ್ಯರಾದ ಮಹೇಶ್ ಏತಡ್ಕ, ರಾಜೀವ್, ರಾಜ ನಿಲಾಂಬರಿ, ನೌಫಲ್ ಕುಂಬ್ಡಾಜೆ, ಮೊಹಜೀರ್, ಸಾಬೀತ್ ಬದಿಯಡ್ಕ, ವಿನಾಯಕ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.