ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ, ಮಹಿಳೆಯರ ಬಿಲ್ಗಾರಿಕೆಯ ವೈಯಕ್ತಿಕ ಕಾಂಪೌಂಡರ್ ಓಪನ್ ರ್ಯಾಂಕಿಂಗ್ ಸುತ್ತಿನಲ್ಲಿ ಭಾರತದ ಶೀತಲ್ ದೇವಿ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಈ ಸುತ್ತಿನಲ್ಲಿ 700 ಅಂಕಗಳನ್ನು ದಾಟಿದ ಭಾರತದ ಮೊದಲ ಪ್ಯಾರಾ ಬಿಲ್ಗಾರಿಕೆ ಪಟು ಆದರು.

ಈಗ ಎಲ್ಲರ ಕಣ್ಣುಗಳು ಶೀತಲ್ ದೇವಿಯ ಮೇಲೆ ನೆಟ್ಟಿವೆ. ದಾಖಲೆಯ ಅಂಕಗಳು ಮತ್ತು ಎರಡನೇ ಸೀಡ್ ಸ್ಥಾನದೊಂದಿಗೆ ಅವರು ಪದಕದ ಪ್ರಬಲ ದಾವೇದಾರರಾಗಿದ್ದಾರೆ.
ಅವರು ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ರ್ಯಾಂಕಿಂಗ್ ಸುತ್ತಿನಲ್ಲಿ 720 ಅಂಕಗಳ ಪೈಕಿ 703 ಗಳಿಸಿದ್ದಾರೆ. ಇದು ಈವರೆಗಿನ ವಿಶ್ವದಾಖಲೆ 698ಕ್ಕಿಂತ 5 ಹೆಚ್ಚಾಗಿದೆ. ಆದರೆ, ವಿಶ್ವ ಚಾಂಪಿಯನ್ ಟರ್ಕಿಯ ಓಝ್ನುರ್ ಕುರ್ ಗಿರ್ಡಿ ಒಂದು ಅಂಕ ಹೆಚ್ಚು ಗಳಿಸಿ, ಅಂದರೆ 704 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದರು.