HEALTH TIPS

ಅಮೆರಿಕ: ಭಾರತದ ರಾಯಭಾರಿಯಾಗಿ ಕ್ವಾತ್ರಾ ಅಧಿಕಾರ ಸ್ವೀಕಾರ

 ವಾಷಿಂಗ್ಟನ್‌: ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ವಿನಯ್‌ ಮೋಹನ್‌ ಕ್ವಾತ್ರಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ನಿವೃತ್ತ ವಿದೇಶಾಂಗ ಕಾರ್ಯದರ್ಶಿಯಾಗಿರುವ ಕ್ವಾತ್ರಾ ಅವರು, ಅಮೆರಿಕದ ರಾಜಧಾನಿ ತಲುಪಿದ್ದಾರೆ.

ತರಣ್‌ಜೀತ್‌ ಸಿಂಗ್‌ ಸಂಧು ಅವರು ಜನವರಿಯಲ್ಲಿ ನಿವೃತ್ತರಾದ ಬಳಿಕ ಖಾಲಿ ಇದ್ದ ರಾಯಭಾರಿ ಹುದ್ದೆಗೆ ಭಾರತವು ಜುಲೈ 19ರಂದು ಕ್ವಾತ್ರಾ ಅವರನ್ನು ನೇಮಿಸಿತ್ತು.

'ಭಾರತದ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಲು ಖುಷಿಯಾಗುತ್ತಿದೆ. ಎರಡು ದೇಶಗಳ ನಡುವಿನ ಬಾಂಧವ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ರಾಯಭಾರ ಕಚೇರಿಯ ತಂಡವು ತನ್ನ ಕೆಲಸವನ್ನು ಮುಂದುವರಿಸಲಿದೆ' ಎಂದು ಕ್ವಾತ್ರಾ ಅವರು 'ಎಕ್ಸ್‌'ನಲ್ಲಿ ತಿಳಿಸಿದ್ದಾರೆ.

ಕ್ವಾತ್ರಾ ಅವರು ಈ ಹಿಂದೆ ಫ್ರಾನ್ಸ್ ಮತ್ತು ನೇಪಾಳದಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries