ಮಂಜೇಶ್ವರ: ಇತಿಹಾಸ ಪ್ರಸಿದ್ದ 18 ಪೇಟೆಗಳ ದೇವಾಲಯವೆಂದೇ ಖ್ಯಾತಿವೆತ್ತ ಮಂಜೇಶ್ವರ ಶ್ರೀಅನಂತೇಶ್ವರ ದೇವಳದಲ್ಲಿ ಶುಕ್ರವಾರ ನಾಗರಪಂಚಮಿ ಉತ್ಸವ ಶ್ರದ್ದಾ ಭಕ್ತಿಗಳೊಂದಿಗೆ ನಡೆಯಿತು. ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆ ಸಹಿತ ಕೇರಳದ ಸಾವಿರಾರು ಭಕ್ತರು ಪಾಲ್ಗೊಂಡು ಅಭಿಷೇಕದಲ್ಲಿ ಪಾಲ್ಗೊಂಡರು.
ಮುಂಜಾನೆ ಶ್ರೀದೇವರ ಪ್ರಾತಃಪೂಜೆಯ ಬಳಿಕ 5.30 ರಿಂದ ಹೊರಗಿನ ನಾಗಕಟ್ಟೆಯಲ್ಲಿ ಅಭಿಷೇಕ ನಡೆಯಿತು. ಮಧ್ಯಾಹ್ನ 12ರ ವರೆಗೂ ನಡೆದ ಅಭಿಷೇಕಗಳ ಬಳಿಕ ದೇವಳದಲ್ಲಿ ವಿಶೇಷ ವಾಸುಕೀಪೂಜೆ ನಡೆದು, ಮಂಗಳಾರತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. ಶ್ರೀಕ್ಷೇತ್ರದ ಪ್ರಧಾನ ಅರ್ಚಕ ವಾಮನ ಶರ್ಮ ಪೂಜೆಗಳನ್ನು ನಿರ್ವಹಿಸಿದರು. ಆಡಳಿತ ಟ್ರಸ್ಟಿಗಳಾದ ಅಧ್ಯಕ್ಷ ಗಣಪತಿ ಪೈ, ಪ್ರಬಂಧಕ ರಾಹುಲ್ ಕಾಮತ್ ಮೊದಲಾದವರು ನೇತೃತ್ವ ವಹಿಸಿದ್ದರು.