ಮುಳ್ಳೇರಿಯ: ಪ್ರಣವ್ ಫೌಂಡೇಶನ್ ಹಾಗೂ ಆರ್.ವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇತ್ತೀಚೆಗೆ ನೆಟ್ಟಣಿಗೆ ಸರ್ಕಾರಿ ಶಾಲೆಯಲ್ಲಿ 40ಕ್ಕೂ ಅಧಿಕ ಮಕ್ಕಳಿಗೆ ಉಚಿತ ಕಲಿಕಾ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಮುಂದಿನ ದಿನಗಳಲ್ಲಿ ನಮ್ಮ ಪ್ರತಿಷ್ಠಾನದ ವತಿಯಿಂದಲೂ ಶಾಲೆಗೆ ಸಹಕಾರ ನೀಡುವುದಾಗಿ ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರತಿμÁ್ಠನದ ಅಧ್ಯಕ್ಷರಾಗಿರುವ ಪುರುμÉೂೀತ್ತಮ ಪುಣಿಂಚತ್ತಾಯರು ತಿಳಿಸಿದರು. ಪ್ರಣವ್ ಫೌಂಡೇಶನ್ ನ ಟ್ರಸ್ಟಿ ಗುರುರಂಜನ್ ಅವರು ಫೌಂಡೇಶನಿನ ಮಾಹಿತಿ ನೀಡಿ ಮಕ್ಕಳಿಗೆ ಪುಸ್ತಕ ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಚಂದ್ರಹಾಸ ರೈ, ದಾಮೋದರ ನಾಯ್ಕ್, ಪುಷ್ಪಲತ, ವಿಜಯರಾಜ್ ಪುಣಿಂಚತ್ತಾಯ ಮುಂತಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಜಯಲತಾ ಎಸ್ ಸ್ವಾಗತಿಸಿ, ಶಿಕ್ಷಕಿ ಅಬಿದಾ ಬಿ. ವಂದಿಸಿದರು.