ಮಂಜೇಶ್ವರ: ವರ್ಕಾಡಿ ಪಂಚಾಯಿತಿ ದೈಗೋಳಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ಶಟರ್ ಮುರಿದು ನುಗ್ಗಿ ಕಳವಿಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಆಗಮಿಸಿ ಮಾಹಿತಿ ಸಂಗ್ರಹಿಸಿದರು.
ಶನಿವಾರ ರಾತ್ರಿ ಕಳವಿಗೆ ಯತಿಸಲಾಗಿದ್ದು, ಶಟರ್ ತೆರೆದ ಸಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಬ್ಯಾಂಕ್ ಕಾರ್ಯದರ್ಶಿ ಜಯರಾಮ್ ಎನ್.ಕೆ ಎಂಬವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಇವರು ಪೊಲೀಸರಿಗೆ ದೂರು ನೀಡಿದ್ದರು. ಶಟರ್ಗ್ ತೆರೆದು ನುಗ್ಗಿದ ಕಳ್ಳರು ಲಾಕರ್ ಒಡೆಯಲು ಯತ್ನಿಸಿದ್ದು, ಲಾಕರ್‍ನಲ್ಲಿದ್ದ ದಾಖಲೆ ಚಲ್ಲಾಪಿಲ್ಲಿಉಗೊಳಿಸಿದ್ದರು. ಸಿಸಿ ಕ್ಯಾಮರಾ ತಪಾಸಣೆಗೊಳಿಸಿದಾಗ ಕಾರಿನಲ್ಲಿ ಆಗಮಿಸಿ, ಮುಖ ಮರೆಮಾಡಿದ ಸ್ಥಿತಿಯಲ್ಲಿ ನಾಲ್ಕು ಮಂದಿ ಸಂಚರಿಸುತ್ತಿರುವ ದೃಶ್ಯ ಪತ್ತೆಯಾಗಿದೆ. ಹಾರ್ಡ್‍ಡಿಸ್ಕ್ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.