ಪತ್ತನಂತಿಟ್ಟ: ನಿರಪುತ್ತರಿ ಪೂಜೆಗಾಗಿ ಶಬರಿಮಲೆ ದೇವಸ್ಥಾನದ ಬಾಗಿಲನ್ನು ಭಾನುವಾರ ಸಂಜೆ ತೆರೆಯಲಾಗಿದೆ. ತಂತ್ರಿ ಮಹೇಶ ಮೋಹನರ್ ಸಮ್ಮುಖದಲ್ಲಿ ಮೇಲ್ಶಾಂತಿ ಪಿ.ಎನ್.ಮಹೇಶ್ ನಂಬೂದಿರಿ ದೀಪ ಬೆಳಗಿದರು.
ಎಡೆಬಿಡದ ಸಿರಿಯುತ್ತಿರುವ ತುಂತುರು ಮಳೆಯ ಜತೆಗೆ ಶರಣಂ ಘೋಷಣೆ ಮಧ್ಯೆ ದೀಪ ಬೆಳಗಿಸಲಾಯಿತು. ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ನಿರಪುತರಿಗೆ ಭತ್ತದ ತೆನೆಗÀಳೊಂದಿಗೆ ಆಗಮಿಸಿದ ವಿವಿಧ ತಂಡಗಳನ್ನು ಸ್ವಾಗತಿಸಿದರು.
ಯಜ್ಞಕುಂಡದಲ್ಲಿ ಅಗ್ನಿ ಬೆಳಗಿದ ನಂತರ ಭಕ್ತರು ಹದಿನೆಂಟನೇ ಮೆಟ್ಟಿಲು ಹತ್ತಿ ಆಗಮಿಸಿದರು. ನಿರಪುತರಿ ಪೂಜೆಗಳಿಗೆ ಭತ್ತದ ತೆನೆಗಳೊಂದಿಗೆ ಆಗಮಿಸಿದ ಮೊದಲ ಗುಂಪನ್ನು ಧ್ವಜಸ್ತಂಭದ ಬಳಿ ದೇವಸ್ವಂ ಮಂಡಳಿ ಅಧ್ಯಕ್ಷರು ಸ್ವಾಗತಿಸಿದರು.
ಆ ಬಳಿಕ ಪಾಲಕ್ಕಾಡ್‍ನಿಂದ ಭತ್ತದ ತೆನೆಗಳೊಂದಿಗೆ ಹಲವು ತಂಡಗಳು ಹದಿನೆಂಟನೇ ಮೆಟ್ಟಿಲು ಹತ್ತಿ ಸನ್ನಿಧಾನ ಸಂದರ್ಶನ ನಡೆಸಿದವು. ಇರುಮುಡಿಕಟ್ಟು ಜತೆಗೆ ಭಕ್ತಾದಿಗಳು ಭತ್ತದ ತೆನೆಗಳೊಂದಿಗೆ ಆಗಮಿಸಿ ಅಯ್ಯಪ್ಪಸ್ವಾಮಿಗೆ ಪೂಜೆ ಸಲ್ಲಿಸಿದರು.
ನಿರಪುತರಿ ಪೂಜೆ ಸೋಮವಾರ ಬೆಳಿಗ್ಗೆ 5.45 ರಿಂದ 6.30 ರ ನಡುವೆ ಸಂಪನ್ನಗೊಂಡಿತು. ಬಳಿಕ ಪೂಜಿಸಿದ ಭತ್ತದ ತೆನೆಗಳನ್ನು ಭಕ್ತರಿಗೆ ವಿತರಿಸಲಾಯಿತು. ಪೂಜೆಗಳ ನಂತರ ಇಂದು ರಾತ್ರಿ 10 ಗಂಟೆಗೆ ಹರಿವರಾಸನ ಹಾಡಿ ನಿರಪುತ್ತರಿ ಉತ್ಸವ ಸಂಪನ್ನಗೊಳ್ಳಲಿದೆ.