ಚೆನ್ನೈ :ಭೂಕುಸಿತ ದುರಂತದಿಂದ ವಯನಾಡು ಜನರ ಜೀವನ ಸಂಕಷ್ಟಕ್ಕೆ ತಲುಪಿದೆ. ಮನೆ, ಕುಟುಂಬ, ಸಾಕುಪ್ರಾಣಿಗಳನ್ನು ಕಳೆದುಕೊಂಡು ಅನಾಥರಾಗಿ ನಿಂತಿದ್ದಾರೆ. ಸಂಕಷ್ಟಲ್ಲಿರುವ ವಯನಾಡ್ ಜನರ ಸಹಾಯಕ್ಕೆ ಈಗಾಗಲೇ ಕೆಲವು ನಟ, ನಟಿಯರು, ರಾಜಕಾರಣಿಗಳು ಹಾಗೂ ಸರ್ಕಾರ ಮುಂದೆ ಬಂದಿದೆ.
ಚೆನ್ನೈನಲ್ಲಿ ಆಟೋ ಚಲಾಯಿಸುವ ಮಹಿಳೆ ಹೆಸರು ರಾಜಿ. ಆಟೋ ಚಾಲನೆ ಇವರ ಜೀವನಕ್ಕೆ ಹಾದಿಯಾಗಿದೆ. ಈಕೆ ಸಾಕಷ್ಟು ಕಷ್ಟವನ್ನು ನೋಡಿ ಬಂದಿರುವ ಮಹಿಳೆ. ತಾನೂ ಕಷ್ಟದಲ್ಲಿದ್ದರು ಕೂಡಾ ಈಕೆ ವಯನಾಡಿನ ದುರಂತದಲ್ಲಿ ಕಷ್ಟ ಪಡುತ್ತಿರುವ ಜನರಿಗೆ ನೆರವಾಗಲು ಆಟೋ ಚಲಾಯಿಸುವ ಮಹಿಳೆ ಸಿದ್ಧವಾಗಿದ್ದಾರೆ.
ರಾಜಿ ಆಟೋದಲ್ಲಿ ಪ್ರಯಾಣಿಕರು ರಾಜಿಗೆ ಹಣ ನೀಡಬೇಕಾಗಿಲ್ಲ ಆ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೇರವಾಗಿ ಕಳುಹಿಸುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಆಟೋ ಚಲಾಯಿಸುವ ಮಹಿಳೆ ರಾಜಿ ಮಾತನಾಡಿ, ಈ ನೋವು ನನಗೆ ಚೆನ್ನಾಗಿ ತಿಳಿದಿದೆ. ಹಸಿವಾದಾಗ ಎಷ್ಟು ಕಷ್ಟವಾಗುತ್ತದೆ ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ. ಕೆಲವು ವರ್ಷಗಳ ಹಿಂದೆ ಪ್ರೀತಿ ಮಾಡಿದ್ದಕ್ಕೆ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದರು. ನನ್ನ ಪತಿ ಹಾಗೂ ನಾನು ಕಷ್ಟಗಳನ್ನು ನೋಡಿ ಜೀವನ ನಡೆಸಿದ್ದೇವೆ. ನನ್ನ ಮಕ್ಕಳಿಗೆ ಏನನ್ನು ಕೊಡಿಸಲಾಗ ಸ್ಥಿತಿ ಇತ್ತು. ಹೀಗಾಗಿ ನಾವು ಇಂದು ಕಷ್ಟದಲ್ಲಿರುವವರಿ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಲು ಸಿದ್ಧರಾಗಿದ್ದೇವೆ. ವಯನಾಡಿನಲ್ಲಿ ನಡೆಸಿರುವ ಈ ಘಟನೆ ಕುರಿತಾಗಿ ಕೇಳಿದಾಗಿನಿಂದ ಸಂತ್ರಸ್ತರಿಗೆ ಸಹಾಯ ಮಾಡಬೇಕು ಎನ್ನುವ ಯೋಚನೆ ಇದೆ. ಆದರೆ ನನ್ನ ಬಳಿ ಹೆಚ್ಚಿನ ಹಣವಿಲ್ಲ. ಹೀಗಾಗಿ ನನ್ನ ಸ್ವಂತ ಆದಾಯವನ್ನು ಬಳಸಿಕೊಂಡು ಸಹಾಯ ಮಾಡಲು ನಿರ್ಧರಿಸಿದ್ದೇನೆ.ನನ್ನ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರು ನನಗೆ ನೀಡುವ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಹಾಗೆ ಮಾಡುತ್ತಿದ್ದೇನೆ ಎಂದಿದ್ದಾರೆ.
ವಯನಾಡಿನಲ್ಲಿ ಭೂಕುಸಿತದ ಬಗ್ಗೆ ತಮಿಳು ಮತ್ತು ಇಂಗ್ಲಿಷ್‌ನಲ್ಲಿ ಆಟೋ ಮೇಲೆ ಬ್ಯಾನರ್ ಹಾಕಲಾಗುತ್ತದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಸ್ಕ್ಯಾನ್ ಮಾಡಲು ಇದು ಕ್ಯೂಆರ್ ಕೋಡ್ ಅನ್ನು ಸಹ ನೀಡುತ್ತದೆ. ನನಗೆ ಪಾವತಿಸದೆಯೇ ಪ್ರಯಾಣಿಕರು ನೇರವಾಗಿ ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿ ಕಳುಹಿಸಬಹುದು. ಹೆಚ್ಚು ಪಾವತಿಸಲು ಬಯಸುವವರು ಅದನ್ನು ಸಹ ಪಾವತಿಸಬಹುದು. ಪಾವತಿ ಮಾಡದವರಿಂದ ಸ್ಕ್ಯಾನರ್ ಮೂಲಕ ಹಣ ಪಡೆದು ನೇರವಾಗಿ ಪರಿಹಾರ ನಿಧಿಗೆ ಕಳುಹಿಸುತ್ತಿದ್ದೇವೆ. ದಿನಕ್ಕೆ 1,500 ರಿಂದ 2,000 ರೂಪಾಯಿ ಸಿಗುತ್ತದೆ. ಭಾನುವಾರ ಮತ್ತು ಸೋಮವಾರ. ಈ ದಿನದ ಹಣವನ್ನು ಪರಿಹಾರ ನಿಧಿಗೆ ನೀಡಲಾಗುವುದು ಎಂದು ರಾಜಿ ಹೇಳಿದರು.