ಕಾಸರಗೋಡು: ಭೂಕುಸಿತದಿಂದ ತತ್ತರಿಸಿರುವ ವಯನಾಡಿಗೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್ ವಿದ್ಯಾರ್ಥಿಗಳು ನೆರವಿನೊಂದಿಗೆ ಧಾವಿಸಿದ್ದಾರೆ. ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಹಸ್ತಾಂತರಿಸಲಾಯಿತು. ಬಟ್ಟೆ, ಆಹಾರ, ಔಷಧಿ, ಪಾತ್ರೆ ಇತ್ಯಾದಿ ಸಾಮಗ್ರಿಗಳನ್ನು ಪೂರೈಸಲಾಯಿತು.
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ನೆರವು ಹಸ್ತಾಂತರಿಸಿದ್ದಾರೆ. ವಿಭಾಗದ ಅಧ್ಯಕ್ಷ ಡಾ. ಎಂ. ನಾಗಲಿಂಗಂ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ಶರತ್ ಬಿ.ಎಂ., ಅಂತೋನಿ ಸಿ.ಜೋಸೆಫ್, ಮುಹಮ್ಮದ್ ಮುರ್ಷಿದ್ ಎ.ಕೆ., ಆನ್‍ಮೇರಿ ಜೈಸನ್, ಮಕ್ಸೂದ್ ಹಾಗೂ ಪ್ರಿಯಾಂಕಾ ಎನ್.ಕೆ ಅವರು ವಯನಾಡ್ ಸುಲ್ತಾನ್ ಬತ್ತೇರಿಯಲ್ಲಿರುವ ಸಂಗ್ರಹಣಾ ಕೇಂದ್ರಕ್ಕೆ ತೆರಳಿ ಸಾಮಗ್ರಿ ಹಸ್ತಾಂತರಿಸಿದರು. ವಯನಾಡು ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ಅವರನ್ನೂ ತಂಡ ಭೇಟಿಯಾಗಿ ರ್ಚಿಸಿದರು. ಪ್ರಭಾರ ಉಪಕುಲಪತಿ ಪೆÇ್ರ. ವಿನ್ಸೆಂಟ್ ಮ್ಯಾಥ್ಯೂ, ರಿಜಿಸ್ಟ್ರಾರ್ ಡಾ. ಎಂ. ಮುರಳೀಧರನ್ ನಂಬಿಯಾರ್, ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ ಜತೆಗಿದ್ದರು.