ಕಾಸರಗೋಡು: ದೇಶ ವಿಭಜನೆಯ ಸಮಯದಲ್ಲಿ ಆದಂತಹ ದುರಂತ, ತ್ಯಾಗ, ಬಲಿದಾನದ ಸನ್ನಿವೇಶಗಳ ಕರಾಳ ಚಿತ್ರಣಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಆ.13 ರಿಂದ 15 ರವರೆಗೆ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಲೀಡ್ ಬ್ಯಾಂಕ್ ಕಾಸರಗೋಡು ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ದೇಶ ವಿಭಜನೆಯ ಕಾಲಾವಧಿಯಲ್ಲಿ ಅನೇಕ ಭಾರತೀಯರು ಸಾವು ನೋವು ಅನುಭವಿಸಿದ್ದು, ವಿಭಜನೆಯಲ್ಲಿ ಅನೇಕ ಕುಟುಂಬಗಳು ಬೀದಿಪಾಲಾಗಬೇಕಾಗಿ ಬಂದಿತ್ತು. ಅನೇಕರು ಪ್ರಾಣ ಕಳೆದುಕೊಂಡರು. ಸಾಮಾಜಿಕ ವಿಭಜನೆ ಮತ್ತು ಅಸಮಾನತೆ ಹೋಗಲಾಡಿಸುವ ಅಗತ್ಯವನುವಿದು ಭಾರತೀಯರಿಗೆ ನೆನಪಿಸುತ್ತದೆ, ಜತೆಗೆ ಏಕತೆ, ಸಾಮಾಜಿಕ ಒಗ್ಗಟ್ಟು ಮತ್ತು ಮಾನವ ಸಬಲೀಕರಣವನ್ನು ಉತ್ತೇಜಿಸುತ್ತದೆ.
ಕಾಸರಗೋಡು ಸಿಟಿ ಸೆಂಟರ್ ಕೆನರಾ ಬ್ಯಾಂಕ್ ವಠಾರದಲ್ಲಿ ಮಡೆದ ಸಮಾರಂಭದಲ್ಲಿ ಬ್ಯಾಂಕ್‍ನ ಕಾಸರಗೋಡು ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಅಂಶುಮಾನ್ ದೇ ಪ್ರದರ್ಶನ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಸೇನಾ ಯೋಧ ಕೆ.ಎಂ.ವಾಸುದೇವನ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಾಸರಗೋಡು ಜಿಲ್ಲಾ ಲೀಡ್ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ತಿಪ್ಪೇಶ್ ಎಸ್, ಬ್ಯಾಂಕ್ ಸಿಬ್ಬಂದಿ, ಆರ್ಥಿಕ ಸಾಕ್ಷರತೆ ಕೇಂದ್ರ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.