ಕಾಸರಗೋಡು: ವೆಳ್ಳರಿಕುಂಡ್ ತಾಲೂಕಿನ ಪನತ್ತಡಿ ಗ್ರಾಮದ ಕಲ್ಲಪ್ಪಳ್ಳಿ ಕಮ್ಮಾಡಿ ಏಕೋಪಾಧ್ಯಾಯ ಶಾಲಾ ಪುನರ್ವಸತಿ ಶಿಬಿರಕ್ಕೆ ಶಾಸಕ ಇ. ಚಂದ್ರಶೇಖರನ್, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಪನತ್ತಡಿ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಭೂಕುಸಿತದ ಭೀತಿಯಿಂದಾಗಿ ಹತ್ತು ಮಕ್ಕಳಿರುವ ಪರಿಶಿಷ್ಟ ಪಂಗಡದ 13 ಕುಟುಂಬಗಳನ್ನು ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಶಿಬಿರದಲ್ಲಿ 25 ಪುರುಷರು, 21 ಮಹಿಳೆಯರು ಮತ್ತು 12 ವರ್ಷದೊಳಗಿನ ಏಳು ಮಕ್ಕಳು ಸೇರಿದಂತೆ 53 ಜನರಿದ್ದಾರೆ. ಶಿಬಿರಕ್ಕೆ ಅರಣ್ಯ ಸಂರಕ್ಷಣಾ ಸಮಿತಿಯಿಂದ ಅಗತ್ಯ ವಸ್ತುಗಳನ್ನು ಇ. ಚಂದ್ರಶೇಖರನ್ ಶಾಸಕ ಹಸ್ತಾಂತರಿಸಿದರು. ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಪ್ರಸಾದ್, ವಾರ್ಡ್ ಸದಸ್ಯ ರಾಧಾಕೃಷ್ಣ ಗೌಡ, ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮದ್ ಮತ್ತು ವೆಳ್ಳರಿಕುಂಡ್ ತಹಶೀಲ್ದಾರ್ ಪಿ.ವಿ.ಮುರಳಿ ಶಿಬಿರದಲ್ಲಿರುವ ಕುಟುಂಬಗಳನ್ನು ಹೊರತುಪಡಿಸಿ ಇತರ ನಾಲ್ಕು ಕುಟುಂಬಗಳ 17 ಮಂದಿಯನ್ನು ಅವರ ಸಂಬAಧಿಕರ ಮನೆಗೆ ಸ್ಥಳಾಂತರಿಸಲಾಗಿದೆ ಎಂದು ಪಣತ್ತಡಿ ಗ್ರಾಮಾಧಿಕಾರಿ ಮಾಹಿತಿ ನೀಡಿದರು.