ಮಂಜೇಶ್ವರ: ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯ-ಗಿಳಿವಿಂಡು ನೇತೃತ್ವದಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸಹಯೋಗದೊಂದಿಗೆ ಬುಧವಾರ ‘ರಾಷ್ಟ್ರಪಿತ ಮಹಾತ್ಮಾ ಗಾಂಧಿ-ರಾಷ್ಟ್ರಕವಿ ಗೋವಿಂದ ಪೈ’ ವಿಷಯದಲ್ಲಿ ಚಿಂತನ-ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಪರಾಹ್ನ 2.30 ರಿಂದ ಗಿಳಿವಿಂಡು ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಸನ್ನ ಹೆಗ್ಗೋಡು ವಿಷಯ ಮಂಡನೆ ನಡೆಸುವರು. ಮಹಾಕವಿ ಗೋವಿಂದ ಪೈ ಸ್ಮಾರಕ ಗ್ರಂಥಾಲಯದ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈಗಳ ಪಂಜರದ ಗಿಳಿ-ಕಥನ ಕಾವ್ಯ ಪ್ರಸ್ತುತಿ ನಡೆಯಲಿದೆ. ಪೆರ್ಲದ ರಂಗ ಡಿಂಡಿಮ ಮಕ್ಕಳ ಡ್ರಾಮಾ ಥೀಯೆಟರ್ ಪ್ರಸ್ತುತಿಗೊಳಿಸುವ ರೂಪಕವನ್ನು ಉದಯ ಸಾರಂಗ್ ನಿರ್ದೇಶಿಸುವರು. ವಿದ್ಯಾರ್ಥಿಗಳ ಮೂಕಾಭಿನಯ ಹಾಗೂ ರಾಷ್ಟ್ರಭಕ್ತಿಗೀತೆಗಳ ಗಾಯನ ನಡೆಯಲಿದೆ.ಗ್ರಂಥಾಲಯದ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್, ಜೊತೆ ಕಾರ್ಯದರ್ಶಿ ಜಯಂತ ಮಾಸ್ತರ್ ಮೊದಲಾದವರು ನೇತೃತ್ವ ವಹಿಸುವರು.