HEALTH TIPS

ದೇಹದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದರೆ ಈ ರೀತಿ ಮಾಡಿ..!

 ಮ್ಮ ದೇಹ ಆಗಾಗ ಹಲವು ಕಾಯಿಲೆಗಳಿಂದ ಬಾಧಿಸುತ್ತದೆ. ಅದರಲ್ಲೂ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಕೈ ಬಿಟ್ಟರು ಅನೇಕ ರೋಗ ರುಜಿನಗಳಿಗೆ ಒಳಗಾಗಬೇಕಾಗುತ್ತದೆ. ಅದರಲ್ಲೂ ದೇಹದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದರೆ ಅದರ ನೋವು ಹೆಚ್ಚಾಗಿಯೇ ಬಾಧಿಸುತ್ತದೆ. ಯೂರಿಕ್ ಆಸಿಡ್ ಕಾಣಿಸಿಕೊಂಡಾಗ ಹೆಚ್ಚಾಗಿ ನೋವು ಕಾಣಿಸಿಕೊಳ್ಳುವುದಲ್ಲದೆ, ಕಿಡ್ನಿಗೂ ಸಮಸ್ಯೆಯನ್ನುಂಟು ಮಾಡುತ್ತದೆ.

ಹಾಗಾದ್ರೆ ಇದನ್ನು ತೊಡೆದು ಹಾಕಲು ಏನು ಮಾಡಬೇಕು ಗೊತ್ತಾ..?

* ಅಮೃತ ಬಳ್ಳಿ, ಒಣಶುಂಠಿ, ಕಟುಕ ಬಳಕೆ ಮಾಡುವುದರಿಂದ ಯೂರಿಕ್ ಆಸಿಡ್ ಅನ್ನು ಶಮನ ಮಾಡಬಹುದು. ಇವುಗಳನ್ನು ಹಾಗೆಯೇ ತೆಗೆದುಕೊಂಡು ಅದರ ಚೂರ್ಣ ಮಾಡಿ ಬಳಕೆ ಮಾಡಬೇಕು.

* ಆಫ್ ಟೀ ಸ್ಪೂನ್ ನಷ್ಟು ಚೂರ್ಣ ತೆಗೆದುಕೊಂಡು, ಜೇನುತುಪ್ಪದ ಜೊತೆಗೆ ಬೆರೆಸಿ ಸೇವನೆ ಮಾಡಬಹುದು. ಅಷ್ಟೇ ಅಲ್ಲ ಬಿಸಿ ನೀರಿನ ಜೊತೆಗೂ ಸೇವನೆ ಮಾಡಬಹುದು. ಈ ಮನೆ ಮದ್ದಿನಿಂದ ವಾತರಕ್ತದ ಸಮಸ್ಯೆ ಕಡಿಮೆಯಾಗುತ್ತದೆ.

* ನಿಂಬೆ ಹಣ್ಣನ್ನು ಬಳಕೆ ಮಾಡುವುದರಿಂದಾನು ಈ ಯೂರಿಕ್ ಆಸಿಡ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು. 10-15 ಎಲೆ ಪುದೀನಾ ಎಲೆಗಳನ್ನು ನೀರಿಗೆ ಹಾಕಿ ಕುದಿಯಲು ಬಿಡಿ. ಬಳಿಕ ಅದಕ್ಕೆ ಎರಡು ಹನಿ ನಿಂಬೆ ರಸವನ್ನು ಹಾಕಿ ಮಿಕ್ಸ್ ಮಾಡಿ, ಪ್ರತಿದಿನ ಕುಡಿಯುವುದರಿಂದಾನೂ ವಾತರಕ್ತ ಕಡಿಮೆಯಾಗಲಿದೆ.

* ನಿತ್ಯ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸುತ್ತಾ ಬಂದರೆ ದೇಹದ ಸಂಧುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗುವುದು. ನಿಂಬೆ ಮತ್ತು ಪುದಿನಾ ಎರಡೂ ನಿರ್ವಿಶೀಕರಣ ಮತ್ತು ಮೂತ್ರವರ್ಧಕ ಗುಣಲಕ್ಷಣಗಳನ್ನು ಒಳಗೊಂಡಿದೆ.ಹಾಗಾಗಿ ಯೂರಿಕ್ ಆಸಿಡ್ ಕರಗಿ ಮೂತ್ರದ ಮೂಲಕವೇ ದೇಹದಿಂದ ಹೊರ ಹೋಗುತ್ತದೆ.ಇದರಿಂದ ಕಿಡ್ನಿ ಸ್ಟೋನ್ ಭಯ ಕೂಡಾ ಇರುವುದಿಲ್ಲ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries